? *ಸಂಪಾಜೆ ಯಕ್ಷೋತ್ಸವ 2017* ?

ಇದರ ಅಂಗವಾಗಿ ಪ್ರಪ್ರಥಮಬಾರಿಗೆ

? *ತೆಂಕುತಿಟ್ಟು ಹವ್ಯಾಸಿ ಕಲಾವಿದರ ಯಕ್ಷಗಾನ ಸ್ಫರ್ಧೆ* ?

▪ದಿನಾಂಕ 4/11/2017 ಶನಿವಾರ ▪

?ಸಮಯ – ಬೆಳಗ್ಗೆ 7ರಿಂದ 11 ರ ತನಕ?

ಭಾಗವಹಿಸುವ ಎಲ್ಲಾ ತಂಡಗಳೂ ಪ್ರದರ್ಶಿಸ ಬೇಕಾದ ಪ್ರಸಂಗ –

? *ಮಾರಣಾಧ್ವರ*?

(ಸಂಯೋಜಕರು ಪದ್ಯಗಳನ್ನು ಆಯ್ದು ಸಿದ್ಧಪಡಿಸಿದ ಇಂದ್ರಜಿತು ಕಾಳಗದ ಕೊನೆಯ ಸನ್ನಿವೇಷ)

ಪ್ರತಿ ತಂಡಕ್ಕೆ ನಿಗದಿತ ಅವಧಿ – ▪20 ರಿಂದ 25 ನಿಮಿಷ▪

ಬಹುಮಾನ & ಗೌರವಧನದ ವಿವರ-

?ಪ್ರಥಮ ಪ್ರಶಸ್ತಿ – *30000*/- ನಗದು?

?ದ್ವಿತೀಯ ಪ್ರಶಸ್ತಿ- *20000*/-ನಗದು?

ವೈಯಕ್ತಿಕ –

*ಇಂದ್ರಜಿತು* ಪಾತ್ರಧಾರಿ-

?ಪ್ರಥಮ- ಬಂಗಾರದ ಪದಕ

?ದ್ವಿತೀಯ- ರಜತ ಪದಕ

ಲಕ್ಷ್ಮಣ ಪಾತ್ರಧಾರಿ-

?ಪ್ರಥಮ- ಬಂಗಾರದ ಪದಕ

?ದ್ವಿತೀಯ – ರಜತ ಪದಕ

*ನಿಬಂಧನೆಗಳು*

?1 ?ಪ್ರತಿ ತಂಡದಲ್ಲಿ ೪ ಹಿಮ್ಮೇಳದ ಕಲಾವಿದರು ೬ ವೇಷಧಾರಿಗಳು ಇರತಕ್ಕದ್ದು.

?2?ಸ್ಫರ್ಧೆ ಹಾಗೂ ಬಹುಮಾನಗಳಿಗೆ ಮುಮ್ಮೇಳದ ನಿರ್ವಹಣೆಯನ್ನು ಮಾತ್ರ ಪರಿಗಣಿಸಲಾಗುವುದು, ಹಿಮ್ಮೇಳವನ್ನು ಇದಕ್ಕೆ ಪರಿಗಣಿಸಲಾಗುವುದಿಲ್ಲ.

?3?ಹಿಮ್ಮೇಳದಲ್ಲಿ ವೃತ್ತಿಪರ ಕಲಾವಿದರು ಭಾಗವಹಿಸಬಹುದು.

RELATED ARTICLES  ಪೆಥಾಯ್ ಚಂಡಮಾರುತ : ಮುಂದಿನ 2 ದಿನದಲ್ಲಿ ಭಾರೀ ಮಳೆ ಸಾಧ್ಯತೆ.

?4 ?ವೇಷಧಾರಿಗಳಾಗಿ ಭಾಗವಹಿಸಲು ಹವ್ಯಾಸಿಗಳಿಗೆ ಮಾತ್ರ ಅವಕಾಶ.ವಿದ್ಯಾರ್ಥಿಗಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಯ ಉಕ್ಷಗಾನ ತಂಡಗಳು ಇದರಲ್ಲಿ ಪಾಲ್ಗೊಳ್ಳಬಹುದು.ವೃತ್ತಿಪರ ಮೇಳಗಳಲ್ಲಿ ತಿರುಗಾಟ ಮಾಡಿದವರು ಭಾಗವಹಿಸುವಂತಿಲ್ಲ.

?5?ಪ್ರತೀ ತಂಡದ ಪ್ರದರ್ಶನದಲ್ಲಿ ಕಾಣಿಸಿಕೊಳ್ಳಬೇಕಾದ ವೇಷಗಳು-
೧)ಇಂದ್ರಜಿತು
೨)ಲಕ್ಷ್ಮಣ
೩)ರಾಮ
೪)ವಿಭೀಷಣ
೫)ಶುಕ್ರಾಚಾರ್ಯ
೬)ಹನೂಮಂತ
(ಶುಕ್ರಾಚಾರ್ಯ & ಹನೂಮಂತನ ಪಾತ್ರಗಳಿದೆ ಪದ ,ಮಾತುಗಳು ಇರುವುದಿಲ್ಲ)

?6?ಎಲ್ಲಾ ತಂಡಗಳಿಗೂ ಸಮಾನವಾಗಿ,ಏಕರೂಪದ ಒಂದೇ ಪ್ರಸಂಗ ಸನ್ನಿವೇಶದ ನಿರ್ದಿಷ್ಟ ಪದ್ಯಗಳನ್ನು ಸಂಯೋಜಿಸಿ ಒದಗಿಸುತ್ತೇವೆ.ಅದನ್ನು ಮಾತ್ರ ರಂಗದಲ್ಲಿ ಬಳಸತಕ್ಕದ್ದು.

?7?ವೇಷಭೂಷಣ – ಹಿಮ್ಮೇಳ ಸಾಮಗ್ರಿಗಳನ್ನು ನಾವೇ ಒದಗಿಸುತ್ತೇವೆ.ತಂಡಗಳಿಗೆ ಅಗತ್ಯವೆನಿಸಿದರೆ ಹಿಮ್ಮೇಳ ಪರಿಕರಗಳನ್ನು ಅವರೇ ತರಬಹುದು.

?8?ಹಿಮ್ಮೇಳದಲ್ಲಿ ಭಾಗವತ,ಮದ್ಲೆಗಾರ,ಚೆಂಡೆವಾದಕ,ಚಕ್ರತಾಳ ವಾದಕರಿಗೆ ಮಾತ್ರ ಅವಕಾಶ.

?9?ಹಿಮ್ಮೇಳ ಮುಮ್ಮೇಳದ ಎಲ್ಲಾ ಕಲಾವಿದರಿಗೆ ಒಂದು ತಂಡದಲ್ಲಿ ಮಾತ್ರ ಭಾಗವಹಿಸಲು ಅವಕಾಶ.

?10?ಯಾವುದೇ ಕಾರಣಕ್ಕೂ ತಂಡಗಳಿಗೆ ಕೊಡಮಾಡಿದ 25ನಿಮಿಷಗಳ ಗರಿಷ್ಠ ಅವಧಿ ಮೀರಿದ ತಂಡಗಳನ್ನು‌ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ.

?11?ಸ್ಫರ್ಧೆಗೆ ಆಯ್ಕೆಯಾದ ಎಲ್ಲಾ ತಂಡಗಳೂ ಭಾಗವಹಿಸುವ ಹಿಮ್ಮೇಳ ಮುಮ್ಮೇಳಗಳ ಎಲ್ಲ ಕಲಾವಿದರ‌ ವಿವರಗಳನ್ನು‌ ,ಯಾರು ಯಾವ ಪಾತ್ರನಿರ್ವಹಿಸುವರೆಂಬ ವಿವರಗಳನ್ನೂ ಮುಂಚಿತವಾಗಿ ನಮಗೆ ನೀಡತಕ್ಕದ್ದು.

RELATED ARTICLES  ಚುನಾವಣೆಗೆ ಮುಹೂರ್ತ ಫಿಕ್ಸ್.

?12?ಸ್ಫರ್ಧಿಸುವ ಎಲ್ಲಾ ತಂಡಗಳೂ ಸ್ಫರ್ಧಾ ದಿನದಂದು ಬೆಳಗ್ಗೆ 6.30 ಕ್ಕೆ ಮುಂಚಿತವಾಗಿ ಸಂಪಾಜೆಗೆ ಬಂದು ತಮ್ಮ ಆಗಮನವನ್ನು ನಮ್ಮಲ್ಲಿ ದೃಢೀಕರಿಸತಕ್ಕದ್ದು.

?13?ಯಕ್ಷಗಾನದ ಪ್ರಸಿದ್ಧ ಕಲಾತಜ್ಞರಾದ ಮೂವರು ಹಿರಿಯರನ್ನು ತೀರ್ಪುಗಾರರಾಗಿ ನಾವು ನಿಯೋಜಿಸುತ್ತೇವೆ.ಫಲಿತಾಂಶ ಹಾಗೂ ಇತರ ಎಲ್ಲಾ ಸ್ಫರ್ಧಾ ಸಂಬಂಧಿ ವಿಚಾರಗಳಲ್ಲಿ‌ ಸಂಯೋಜಕರಾದ ನಮ್ಮ ನಿರ್ಣಯವೇ ಅಂತಿಮ.

?14?ಸ್ಫರ್ಧೆಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ಯಾವುದೇ ವಿವಾದಗಳನ್ನು ಸೃಷ್ಟಿಸಿ ಮುಂದುವರಿಸುವಂತಿಲ್ಲ.ಇದಕ್ಕೆ ಒಪ್ಪಿದ ತಂಡಗಳು ಮಾತ್ರ ಪ್ರವೇಶಪತ್ರವನ್ನು ಕಳುಹಿಸಲು ಅರ್ಹತೆ ಹೊಂದುತ್ತವೆ.

?15?ಭಾಗವಹಿಸುವ ಪ್ರತಿ ತಂಡಕ್ಕೂ,ಅವರ ಹಿಮ್ಮೇಳ- ಮುಮ್ಮೇಳಗಳ ಸಮಗ್ರ ಖರ್ಚುವೆಚ್ಚದ ರೂಪದಲ್ಲಿ 15000/- ಮೊತ್ತದ ಗೌರವಧನವನ್ನು ಕೊಡಲಾಗುವುದು.

◾ತಂಡದ ಸಮಗ್ರ ವಿವರ& ವಿಳಾಸದೊಂದಿಗೆ ಪ್ರವೇಶ ಪತ್ರ ಒಕ್ಟೋಬರ್ ೧೦ ನೇ ತಾರೀಕಿನ ಒಳಗಾಗಿ ನಮ್ಮ ಕೈಸೇರಬೇಕು.

⚫ಪ್ರವೇಶ ಪತ್ರ ಕಳುಹಿಸ ಬೇಕಾದ ವಿಳಾಸ-

Vasudeva Ranga Bhat
“Devalaya”
Radha Apartment
Adkadakatte road
P.O.Nittur
Udupi 576103

Email ID – [email protected]

contact number – +919845331742