ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗಷ್ಟೇ ಕುಮಟಾದ ಗಿಬ್ ಹೈಸ್ಕೂಲ್‌ನಲ್ಲಿ ನಡೆದ ೨೦೨೨-೨೩ನೇ ಸಾಲಿನ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರಲ್ಲದೆ, ಭಾಗವಹಿಸಿದ ವಿವಿಧ ಸ್ಪರ್ಧೆಗಳ ಗೆಲುವಿನಲ್ಲಿ ಸಿಂಹಪಾಲು ಪಡೆದುಕೊಂಡು ‘ಸಮಗ್ರ ಸಾಧನೆಗೈದ ಶಾಲೆ’ ಎಂಬ ಹೆಗ್ಗಳಿಕೆಗೂ ಸಿವಿಎಸ್‌ಕೆ ಪಾತ್ರವಾಗಿದೆ.
ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕುಮಾರಿ ಭೂಮಿಕಾ ಭಟ್ಟ, ಕನ್ನಡ ಆಶುಭಾಷಣದಲ್ಲಿ ಕುಮಾರಿ ಸ್ನೇಹಾ ನಾಯ್ಕ, ಕೊಂಕಣಿ ಭಾಷಣದಲ್ಲಿ ಕುಮಾರ ಶ್ರೀನಿವಾಸ ಶಾನಭಾಗ, ಹಿಂದಿ ಭಾಷಣದಲ್ಲಿ ಕುಮಾರಿ ಪ್ರಜ್ಞಾ ಭಟ್ಟ, ಚಿತ್ರಕಲೆಯಲ್ಲಿ ಕುಮಾರ ಭರತ ನಾಯ್ಕ, ಚರ್ಚಾ ಸ್ಪರ್ದೆಯಲ್ಲಿ ಕುಮಾರಿ ಕೃತಿಕಾ ಭಟ್ಟ, ಶಯತ್‌ನಲ್ಲಿ ಕುಮಾರಿ ಶ್ರೇಯಾ ಹೆಬ್ಬಾರ, ಹಾಸ್ಯದಲ್ಲಿ ಕುಮಾರ ವಿಠ್ಠಲ ಶಾನಭಾಗ, ಧಾರ್ಮಿಕ ಪಠಣದಲ್ಲಿ ಕುಮಾರಿ ವೈಷ್ಣವಿ ಹೆಗಡೆ ಹೀಗೆ ಒಟ್ಟೂ ಒಂಭತ್ತು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದರೆ, ಭಾವಗೀತೆಯಲ್ಲಿ ಕುಮಾರಿ ಸೃಜನಾ ನಾಯ್ಕ, ಜನಪದ ಗೀತೆಯಲ್ಲಿ ಕುಮಾರಿ ಯುತಿಕಾ ಪ್ರಭು, ಸಂಸ್ಕೃತ ಭಾಷಣದಲ್ಲಿ ಕುಮಾರ ಪ್ರಮಥ ಅಡಿ ಹೀಗೆ ಒಟ್ಟೂ ಮೂರು ಸ್ಪರ್ಧೆಗಳಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ರಸಪ್ರಶ್ನೆಯಲ್ಲಿ ಕುಮಾರಿ ಕೃತಿಕಾ ಗಾಂವಕರ್ ಹಾಗೂ ಕುಮಾರಿ ದಿಶಾ ಸಂಗಡಿಗರು ತೃತೀಯ ಸ್ಥಾನ ಗಳಿಸಿದ್ದಾರೆ. ಒಟ್ಟಾರೆಯಾಗಿ ಹದಿಮೂರು ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುವುದರ ಮೂಲಕ ಶಾಲೆಯ ಕೀರ್ತಿಗೆ ಭಾಜನರಾಗಿದ್ದಾರೆ.
ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಅಭಿನಂದಿಸಿ ಮುಂದಿನ ಜಿಲ್ಲಾ ಮಟ್ಟದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.