ಶಿರಸಿ: ಇತ್ತೀಚೆಗೆ ದಾಖಲಾದ ಕಳ್ಳತನದ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಹಿಡಿಯುವಲ್ಲಿ ಬನವಾಸಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೋಲೀಸರ ಚುರುಕಿನ ಕಾರ್ಯಾಚರಣೆಯಲ್ಲಿ ಮಹಮ್ಮದ್ ಕೈಫ್, ವಿಶ್ವ ಪಾವಸ್ಕರ್,ಯಾಸೀನ್,ರಿಯಾಜ್ ಎಂಬುವವರನ್ನು ಬಂಧಿಸಿದ್ದು, ಕಳುವಾದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇಬ್ಬರು ಕಾಲೇಜು ವಿದ್ಯಾರ್ಥಿಗಳು ಮತ್ತು ಓರ್ವ ಕೂಲಿಕಾರ್ಮಿಕ, ಓರ್ವ ಕೃಷಿಕ ಸೇರಿ ಮನೆ ಕಳ್ಳತನ ನಡೆಸುತ್ತಿದ್ದರು‌ ಎನ್ನಲಾಗಿದ್ದು, ಪೊಲೀಸ್ ತನಿಖೆ ವೇಳೆ ಮಹಮ್ಮದ್ ಕೈಫ್ ಫೆಬ್ರುವರಿ 16ರಂದು ಬನವಾಸಿಯ ಸುವರ್ಣಾ ಮಾಲತೇಶ ಎಂಬುವವರ ಮನೆಯಲ್ಲಿಯೂ ಸಹ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಹೀಗಾಗಿ ಮತ್ತೊಂದು ಕಳ್ಳತನ ಪ್ರಕರಣವೂ ಬೇಧಿಸಿದಂತಾಗಿದೆ. ಬಂಧಿತ ಆರೋಪಿಗಳಿಂದ 2.75 ಲಕ್ಷ ನಗದು ಹಾಗೂ 10 ಗ್ರಾಂ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


ಈ ಕಾರ್ಯಾಚರಣೆಯಲ್ಲಿ ಪೊಲೀಸ್ ಅಧೀಕ್ಷಕಿ ಸುಮನ್ ಪೆನ್ನೇಕರ್,ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್,ರವಿ ನಾಯ್ಕ್, ರಾಮಚಂದ್ರ ನಾಯಕ್ ನೇತೃತ್ವದಲ್ಲಿ ಬನವಾಸಿ ಪಿಎಸ್ಐ ಹನುಮಂತ್ ಬಿರಾದಾರ್, ಚಂದ್ರಕಲಾ ಪತ್ತಾರ್, ಚಂದ್ರಪ್ಪ ಕೋರವರ್, ಸಂತೋಷ್, ಪ್ರಸಾದ್ ಮಡಿವಾಳ್, ಬಸವರಾಜ್ ಜಾಡರ್ಇನ್ನಿತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

RELATED ARTICLES  ಮಹಾಭಾರತದಲ್ಲೂ ಇದ್ದ ರಾಮನ ವಂಶಸ್ಥರು? ಕುರುಕ್ಷೇತ್ರದ ಯುದ್ಧದಲ್ಲಿ ಬೆಂಬಲಿಸಿದ್ದು ಯಾರನ್ನ?