ಶಿರಸಿ: ವ್ಯಕ್ತಿಯೊಬ್ಬ ಸಾರಾಯಿ ಎಂದು ತಿಳಿದು ನಶೆಯಲ್ಲಿ ಯಾವುದೋ ಬಾಟಲಿಯಲ್ಲಿದ್ದ ವಿಷ ಕುಡಿದು ಸಾವನ್ನಪ್ಪಿರುವ ಘಟನೆ ಶಿರಸಿ ತಾಲೂಕಿನ ಬೊಪ್ಪನಳ್ಳಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಮೃತ ವ್ಯಕ್ತಿಯನ್ನು ಭರತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ. ಇತನು ಕೂಲಿ ಕೆಲಸ ಮಾಡಿಕೊಂಡಿದ್ದ. ವಿಪರೀತ ಸಾರಾಯಿ ಕುಡಿಯುವ ಚಟ ಹೊಂದಿದ್ದ.
ಶಿರಸಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ತನ್ನ ಸ್ನೇಹಿತ ಕಿಶೋರ್ ಎನ್ನುವಾತನ ರೂಮಿಗೆ ಸಾರಾಯಿಯ ಬಾಟಲಿಯೊಂದಿಗೆ ತೆರಳಿದ್ದ. ಈತನು ರೂಮಿನಲ್ಲೇ ಕುಳಿತು ಬಾಟಲಿಯಿಂದ ಅರ್ಧ ಸಾರಾಯಿ ಸೇವಿಸಿದ್ದ , ಇನ್ನರ್ಧ ಸಾರಾಯಿಯ ಕುಡಿಯುವ ಮುನ್ನ ನಶೆಯಲ್ಲಿ ಸಾರಾಯಿಯ ಬಾಟಲಿಯ ಬದಲು ಯಾವುದೋ ವಿಷದ ಬಾಟಲಿಯಿಂದ ವಿಷ ಕುಡಿದು ಮೃತಪಟ್ಟಿದ್ದಾನೆ ಎನ್ನಲಾಗಿದೆ.
ಇದರಿಂದಾಗಿ ಅಸ್ವಸ್ಥಗೊಂಡಿದ್ದ ಭರತ್‌ನನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.