ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬ್ರಹತ್ ಗೋಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಕುರಿತಾಗಿ ಮಾಹಿತಿ ನೀಡಲು ಇಂದು ಕುಮಟಾದ ಖಾಸಗಿ ಹೊಟೆಲ್ನಲ್ಲಿ ಪತ್ರಿಕಾಗೋಷ್ಟಿ ನಡೆಯಿತು. ಇದರಲ್ಲಿ ಭಾಗವಹಿಸಿದ ಜಿಲ್ಲಾ ಸಂಚಾಲಕ ಸುಬ್ರಾಯ ಭಟ್ಟ ಗೋ ಸಂಜೀವಿನಿ ಹಾಗೂ ಅಭಿಯಾನದ ಕಾರ್ಯಗಳ ಬಗ್ಗೆ ತಿಳಿಸುತ್ತಾ ಕುಮಟಾದಲ್ಲಿ ಈ ಅಭಿಯಾನದ ಪ್ರಯುಕ್ತ ಅಕ್ಟೋರ್ 2ರಂದು ಬೆಳಿಗ್ಗೆ 9:30ಕ್ಕೆ ಭೂದೇವಿ ಅಮ್ಮನವರ ದೇವಾಲಯದಿಂದ ಬ್ರಹತ್ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು ಹಲವು ಸಂಘಟನೆಗಳ ಪ್ರಮುಖರು,ಗಣ್ಯರು,ಗೋಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ. ಹಳದೀಪುರ ಮಠದ ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿ ಪಾಲ್ಗೊಂಡು ಆಶೀರ್ವದಿಸಲಿದ್ದಾರೆ ಎಂದರು.ಎಲ್ಲಾ ಮಂಡಲಗಳ ಕಾರ್ಯಕರ್ತರು, ಶ್ರೀಮಠದ ಸದ್ಭಕ್ತರು, ಸಂಘಟನೆಗಳ ಪ್ರಮುಖರು,ಕಾರ್ಯಕರ್ತರು ಗೋಸಂಜೀವಿನಿಯಿಂದ ಗೋವಿನ ಪ್ರಾಣ ಉಳಿಸುವ ಶ್ರೀಗಳ ಸಂಕಲ್ಪದ ಈ ಮಹತ್ತರ ಉದ್ದೇಶವನ್ನು ಸಾಕಾರಗೊಳಿಸಲು ಕಿಂಚಿತ್ ಸೇವೆ ಸಲ್ಲಿಸಲು ನಡೆಯುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ವಿನಂನಂತಿಸಿದರು.

RELATED ARTICLES  ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ ಜಾಲಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು

ಕುಮಟಾ ತಾಲೂಕಾ ಗೋ ಪರಿವಾರದ ಅಧ್ಯಕ್ಷ ಕಿಶನ್ ವಾಳ್ಕೆ ಅಭಿಯಾನದ ಪೂರ್ಣ ವಿವರ ನೀಡಿದರು. ಎಲ್ಲರೂ ಸಹಕಾರ ನೀಡುವಂತೆ ವಿನಂತಿಸಿದರು.

RELATED ARTICLES  ಸಲಿಂಗಕಾಮಿಗಳ ಪರ ತೀರ್ಪನ್ನು ಸ್ವಾಗತಿಸಿದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದೇನು ಗೊತ್ತಾ?

ಪತ್ರಿಕಾಗೋಷ್ಟಿಯಲ್ಲಿ ಎಂ.ಜಿ ಭಟ್ಟ ,ರವೀಂದ್ರ ಭಟ್ಟ ಸೂರಿ, ಪ್ರವೀಣ ಹೆಗಡೆ, ಲಲಿತಾ ಹೆಗಡೆ ಇದ್ದರು.