ಕುಮಟಾ: ತಾಲೂಕಿನ ಊರಕೇರಿಯ ನಿವೃತ್ತ ಸೈನಿಕ ಡಾ.ಕೃಷ್ಣರಾಯ ವೆಂಕಟರಮಣ ನಾಯಕ ಅಗ್ರಬಾರ (82) ಅವರು ಸೋಮವಾರ ತಡರಾತ್ರಿ ನಿಧನರಾದರು.
ಅವರು ಭಾರತೀಯ ಸೈನ್ಯದ ಮೊದಲ ದರ್ಜೆಯ ನರ್ಸಿಂಗ್ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿ ಕರ್ನಾಟಕ ಸರಕಾರದಲ್ಲಿ ಕೃಷಿ ಸಹಾಯಕರಾಗಿಯೂ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಆರ್.ಎಂ.ಪಿ. ಆಗಿಯೂ ಹಳ್ಳಿಗಾಡಿನ ರೋಗಿಗಳಿಗೂ ಚಿಕಿತ್ಸೆ ನೀಡುತ್ತಿದ್ದರು.
ಸೈನ್ಯದಲ್ಲಿರುವಾಗಲೇ ಇಂಡಿಯನ್ ಪ್ಯಾರಾಟ್ರೂಪರ್ ಆಗಿಯೂ ತಮ್ಮ ಪ್ರತಿಭೆ ಮೆರೆದ ಕೃಷ್ಣರಾಯ ನಾಯಕ ಅವರು 14 ಬಾರಿ ಪ್ಯಾರಾಟ್ರೂಪರ್ ನಿಂದ ಇಳಿದು ಸಾಧನೆಗೈದಿದ್ದರು.

RELATED ARTICLES  ಇಂದಿನ(ದಿ-26/10/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.


ಪ್ರಜಾಪಿತ ಬ್ರಹ್ಮಾಕುಮಾರಿ ಸಂಸ್ಥೆಯ ಅನುಯಾಯಿಯಾಗಿದ್ದ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.