ಭಟ್ಕಳ : PFI ಸಂಘಟನೆಯ ನಿಷೇಧದ ಬಿಸಿ ಒಂದೆಡೆಯಾದರೆ ಇನ್ನೊಂದೆಡೆ ಸಂಘಟನೆಗೆ ಸಂಬಂಧಿಸಿದವರ ಮೇಲಿನ ದಾಳಿ ಮುಂದುವರೆದಿದೆ. ಭಟ್ಕಳದಲ್ಲಿ ಉಪವಿಭಾಗಾಧಿಕಾರಿ ಮಮತಾದೇವಿ, ಡಿವೈಎಸ್ಪಿ ಬೆಳ್ಳಿಯಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು ,ನಗರದ ಮದೀನಾ ಕಾಲೋನಿಯ ನಿವಾಸಿಗಳಾದ ಪಿಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಲ್ಮಾನ್, ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಮನೆ ಮೇಲೂ ದಾಳಿ ನಡೆಸಿದ್ದು ದಾಖಲೆಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತಿದ್ದಾರೆ.

RELATED ARTICLES  ಜ್ಞಾನ ಮಾರ್ಗದಲ್ಲಿರುವವರು ಎಂದಿಗೂ ವೈಭವ ಮತ್ತು ಆಡಂಬರಗಳಿಂದ ಮುಕ್ತರಾಗಿರುತ್ತಾರೆ : ಭಾರತಿ ಶರ್ಮಾ

ತಾಲೂಕಿನ ಎರಡು ಕಡೆ ನಿಷೇಧಿತ ಪಿ.ಎಫ್.ಐ ಮುಖಂಡರ ಮನೆಗಳ ಮೇಲೆ ಸಹಾಯಕ ಆಯುಕ್ತರು ಹಾಗೂ ತಹಶೀಲ್ದಾರ್ ನೇತೃತ್ವದ ಎರಡು ಪ್ರತ್ಯೇಕ ತಂಡ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ.

ಸಹಾಯಕ ಆಯುಕ್ತರ ನೇತೃತ್ವದ ಒಂದು ತಂಡ ಉಮರ್ ಸ್ಟ್ರಿಟ್ ಮುಸಾನಗರದಲ್ಲಿರುವ ಪಿ.ಎಫ್.ಐ ಜಿಲ್ಲಾಧ್ಯಕ್ಷ ಅಬ್ದುಲ್ ಕರೀಂ ಬೆಹಟ್ಟಿ ಮನೆಯಲ್ಲಿ ಶೋಧಕಾರ್ಯ ನಡೆಸಿದೆ.

ತಹಶಿಲ್ದಾರ್ ಹಾಗೂ ಡಿವೈಎಸ್ಪಿ ನೇತೃತ್ವದ ಇನ್ನೊಂದು ತಂಡ ಜಾಮಿಯಾಬಾದ್ ಕ್ರಾಸ್ ಅಬೂಬಕರ್ ಮಸೀದಿ ಸಮೀಪದ ಮೊಹಮ್ಮದ್ ಸಲ್ಮಾನ್ ಮನೆಯ ಮೇಲೆ ದಾಳಿ ನಡೆಸಿ ಶೋಧಕಾರ್ಯ ಕೈಗೊಂಡಿದೆ.

RELATED ARTICLES  ಅಭಿವೃದ್ಧಿ ಮಾಡಿಸುವಲ್ಲಿ ದಿನಕರ ಶೆಟ್ಟಿ ಬೇರೆಲ್ಲಾ ಶಾಸಕರಿಗಿಂತ ಎರಡು ಪಟ್ಟು ಮುಂದೆ: ಶಾಸಕ ಸುನೀಲ್ ನಾಯ್ಕ

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತರಾದ ಮಮತಾ ದೇವಿ, ತಹಶೀಲ್ದಾರ್ ಸುಮಂತ ಬಿ, ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಗ್ರಾಮೀಣ ಠಾಣಾ ಸಿ.ಪಿ.ಐ ಮಹಾಬಲೇಶ್ವರ ನಾಯ್ಕ ಶೋಧ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.