ಯಲ್ಲಾಪುರ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ ಅನೇಕ ಎಡರು-ತೊಡರುಗಳನ್ನು ದಾಟಿ ಕೊನೆಗೂ ನಿರ್ಣಾಯಕ ಘಟ್ಟ ತಲುಪಿದಂತಿದೆ. ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದ್ದು ಸಮಿತಿಯು ಸ್ಥಗಿತಗೊಂಡಿರುವ ಹುಬ್ಬಳ್ಳಿ-ಅಂಕೋಲಾ ರೈಲು ಯೋಜನೆಯ ಮಾರ್ಗ ಪರಿಶೀಲನೆ ಹಾಗೂ ಸಾರ್ವಜನಿಕ ಅಹವಾಲು ಸ್ವೀಕರಿಸುವ ಕಾರ್ಯ ಕೈಗೊಳ್ಳುತ್ತಿದೆ. ಅದರಂತೆ ಯಲ್ಲಾಪುರ ತಾಲೂಕಿನಲ್ಲಿ ಹಾದು ಹೋಗುವ ರೈಲ್ವೆ ಮಾರ್ಗದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

RELATED ARTICLES  ಕಾರವಾರದಲ್ಲಿ ಕಳ್ಳತನ ದಂಗಾದ ಜನತೆ!


ಕೇಂದ್ರದಿಂದ ಆಗಮಿಸಿದ ತಂಡವು ಅರಬೈಲು ಘಟ್ಟ ಪ್ರದೇಶ , ಭೂಕುಸಿತವಾದ ತಳಕೇಬೈಲು, ಬಾಸಲ್‌ನ ಚಿಟಕೇಬೈಲ ಇನ್ನಿತರ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು.
ಸಮಿತಿಯ ಸದಸ್ಯರು ಮಾಧ್ಯಮದವರೊಂದಿಗೆ ಏನನ್ನೂ ಹಂಚಿಕೊಳ್ಳದೇ ತಮ್ಮ ಪರಿಶೀಲನಾ ಕಾರ್ಯ ಕೈಗೊಂಡು ಮುಕ್ತಾಯಗೊಳಿಸಿ ಮರಳಿದರು.

RELATED ARTICLES  ಸಚಿವ ಆರ್.ವಿ.ದೇಶಪಾಂಡೆ ಪರಮಾಪ್ತ ಸುಭಾಷ ಕೊರ್ವೆಕರ ಮನೆಗಳ ಮೇಲೆ ಐಟಿ ರೈಡ್!