ಅಂಕೋಲಾ : ಉತ್ತರ ಕನ್ನಡದಲ್ಲಿ ಮಹಿಳೆಯರು ಹಾಗೂ ಯುವತಿಯರ ನಾಪತ್ತೆ ಪ್ರಕರಣಗಳು ಮತ್ತೆ ಮುಂದುವರೆದಿದ್ದು, ಚೌತಿ ಹಬ್ಬಕ್ಕೆಂದು ತವರು ಮನೆಗೆ ಬಂದು ಮರಳಿ ಹೋಗಿದ್ದ ವಿವಾಹಿತ ಮಹಿಳೆ ಕಾಣೆ ಆಗಿರುವ ಘಟನೆ ಇದೀಗ ಮತ್ತೆ ಬೆಳಕಿಗೆ ಬಂದಿದೆ.

ತಾಲೂಕಿನ ಮೊಗಟಾ ನಿವಾಸಿ ಕುಸುಮಾ ಗಣಪತಿ ಅಂಬಿಗ ಎಂಬ ಮಹಿಳೆ ನಾಪತ್ತೆಯಾದ ಕುರಿತು ಆಕೆಯ ತಾಯಿ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದಾರೆ. ಕಾಣೆಯಾದ ಮಹಿಳೆಗೆ ಸುಮಾರು 39 ವರ್ಷ ವಯಸ್ಸಾಗಿತ್ತು ಎನ್ನಲಾಗಿದೆ.

ಈಕೆ ಗಣೇಶ ಚತುರ್ಥಿಗೆ ಮಿರ್ಜಾನ ತಾರಿಬಾಗಿಲಿನ ತನ್ನ ತವರು ಮನೆಗೆ ಬಂದು ಸೆಪ್ಟೆಂಬರ್ 6 ರಂದು ಅಂಕೋಲಾ ತಾಲೂಕಿನ ಮೊಗಟಾದಲ್ಲಿರುವ ತನ್ನ ಗಂಡನ ಮನೆಗೆ ಮರಳಿ ಹೋಗುತ್ತೇನೆ ಎ೦ದು ಹೇಳಿ ಹೋದವಳು, ಅಂದಿನಿಂದ ಇಂದಿನ ವರೆಗೂ ಯಾವುದೇ ಪೋನ್ ಸಂಪರ್ಕ ಮಾಡದೇ ಮರಳಿ ಮನೆಗೂ ಬಾರದೇ ಕಾಣೆಯಾಗಿದ್ದಾಳೆ ಎನ್ನಲಾಗಿದೆ.

RELATED ARTICLES  ಫೋಟೋ ಸ್ಟುಡಿಯೋಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ

ಇದನ್ನೂ ಓದಿ – ಸ್ನಾನ ಮಾಡಲು ಹೋದ ಯುವಕ ನೀರುಪಾಲು : ಕುಮಟಾದಲ್ಲಿ ನಡೆಯಿತು ದುರ್ಘಟನೆ.

ಈ ಬಗ್ಗೆ ನೊಂದ ತಾಯಿ ಮಗಳನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆ ಎಲ್ಲಿಯಾದರೂ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES  ಶ್ರೀ ಗಣೇಶ ಪಂಚರತ್ನ ಸ್ತೋತ್ರ