ತುಮಕೂರು: ಈ ವ್ಯಕ್ತಿಯನ್ನು ನೋಡಿದ ಮೇಲೆ ಈತ ಮನುಷ್ಯನಾ ಅನ್ನುವ ಪ್ರಶ್ನೆ ಖಂಡಿತಾ ಮೂಡುತ್ತದೆ. ಪ್ರಶ್ನೆ ಮೂಡದಿರಲು ಸಾಧ್ಯವೂ ಇಲ್ಲ. ವೈದ್ಯಕೀಯ ಲೋಕಕ್ಕೆ ಸವಾಲೆಸೆದಿರುವ ಈತ ಪ್ರಪಂಚಕ್ಕೆ ಅಚ್ಚರಿಯೇ ಸರಿ. ಹಾಲು ಕುಡಿದ ಮನುಷ್ಯನೇ ಬದುಕೋಲ್ಲ ಅಂದ ಮೇಲೆ ಆಯಿಲ್ ಕುಡಿದೋನು ಬದುಕುತ್ತಾನೆಯೇ ಅನ್ನುವ ಮಾತನ್ನು ಸುಳ್ಳು ಮಾಡಿದ್ದಾನೆ ಈ ಆಯಿಲ್ ಪ್ರಿಯ.

ಈತನ ಹೆಸರು ಆಯಿಲ್ ರಾಜ್ ಅಲಿಯಾಸ್ ಕುಮಾರ್. ಎಲ್ಲಿಯವನು ಎಂದು ಕೇಳಿದ್ರೆ ಇವನು ಶಿವಮೊಗ್ಗ ಅಂತ ಅಷ್ಟೇ ಮಾಹಿತಿ ಸಿಗೋದು. ಈತ ಕುಡಿಯೋದು ಮತ್ತು ತಿನ್ನೋದು ಯಂತ್ರಗಳಿಗೆ ಬಳಸವು ಆಯಿಲ್. ಕಳೆದ 30 ವರ್ಷದಿಂದ ಹೀಗೆ ಸಿಕ್ಕ ಸಿಕ್ಕ ಆಯಿಲ್ ಕುಡಿದು ಬದುಕುತ್ತಿದ್ದಾನಂತೆ. ಹೇಗೆ ಸಾಧ್ಯ ಎಂದು ಪ್ರಶ್ನೆ ಕೇಳಿದ್ರೆ ಕೈಯಲ್ಲಿರುವ ಆಯಿಲ್ ಬಾಟಲಿ ತೆಗೆದುಕ ಬಾಯಿಗಿಡುತ್ತಾನೆ.

RELATED ARTICLES  ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಇಬ್ಬರು ಸಾವು.

ಹೀಗೆ ಆಯಿಲ್ ಕುಡಿಯುತ್ತಿರುವುದರ ಹಿಂದೆ ದುರಂತ ಕಥೆಯೊಂದಿದೆ. ಈತ ಶಿವಮೊಗ್ಗಕ್ಕೆ ಕೆಲಸಕ್ಕೆ ಎಂದು ಹೋದಾಗ ಅಲ್ಲಿ ಈತನಿಂದ ದುಡಿಸಿಕೊಂಡು ಸಂಬಳ ಕೊಡದೆ ಮಾಲೀಕರು ಹೊರ ಹಾಕಿದ್ರಂತೆ.ಕೈಯಲ್ಲಿ ಕಾಸಿಲ್ಲದೆ ಅಲೆಯುತ್ತಿದ್ದಾಗ 17 ವರ್ಷದ ಕುಮಾರ್ ಹಸಿವಿನಿಂದಾಗಿ ಊಟವನ್ನ ಬೇಡಿದ್ದಾನೆ. ಯಾರೂ ಕೂಡ ತುತ್ತು ಅನ್ನವನ್ನೂ ನೀಡಲಿಲ್ಲ. ಆಗ ಕುಮಾರ್ ಗೆ ಕಂಡಿದ್ದು ಆಯಿಲ್ ಮತ್ತು ಸುಟ್ಟ ಪೇಪರ್. ಅಂದು ಹಸಿವಿನಿಂದ ಕಂಗೆಟ್ಟು ಕುಡಿದ ಆಯಿಲ್ ಇದೀಗ ಅಭ್ಯಾಸವಾಗಿಬಿಟ್ಟಿದೆಯಂತೆ.

RELATED ARTICLES  ಮತದಾನ ಬೇಗ ಮಾಡಿ !

ಕಳೆದ ಮೂರ್ನಾಲ್ಕು ವರ್ಷಗಳಿಂದ ಈತ ತುಮಕೂರಿನಲ್ಲಿಯೇ ವಾಸ್ತವ್ಯ ಹೂಡುತ್ತಿದ್ದು , ಸ್ಥಳೀಯರೊಬ್ಬರ ಪರಿಚಯವೂ ಈತನಿಗಿದೆ . ಹಸಿವಾದಾಗಲೆಲ್ಲಾ ಗ್ಯಾರೇಜ್ ಗಳಿಗೆ ಹೋಗಿ ವೇಸ್ಟ್ ಆಯಿಲ್ ಪಡೆದುಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಯಾರಾದರೂ ಟೀ ಕಾಫಿ ಕೊಡಿಸಿದರೆ , ಕುಡೀತಾನೆ ಬಿಟ್ರೆ , ಬೇರೆ ಆಹಾರವನ್ನೇ ತಿನ್ನೋದಿಲ್ಲ.