ಯಲ್ಲಾಪುರ : ಪೆಟ್ರೋಲ್ ಟ್ಯಾಂಕರ್‌ ವೊಂದು ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದ ಘಟನೆ ಆರತಿಬೈಲ್ ಘಟ್ಟದಲ್ಲಿ ನಡೆದಿದೆ ಎಂದು ತಿಳಿದುಬಂದಿದೆ. ಈ ಟ್ಯಾಂಕರ್ ಮಂಗಳೂರಿನಿಂದ ಬೆಳಗಾವಿ ಕಡೆಗೆ ಪೆಟ್ರೋಲ್ ತುಂಬಿಕೊಂಡು ಹೋಗುತ್ತಿದ್ದಾಗ,ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕೆ ಉರುಳಿ ಬಿದ್ದ ಪರಿಣಾಮ ಪೆಟ್ರೋಲ್ ಟ್ಯಾಂಕಿಗೆ ಹಾನಿಯಾಗಿ ಪೆಟ್ರೋಲ್ ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗಿದೆ.ಆದರೆ ಪೊಲೀಸರು ಹಾಗೂ ಸ್ಥಳೀಯರ ಸಮಯ ಪ್ರಜ್ಞೆಯಿಂದ ಈ ಭಾರೀ ದುರಂತ ತಪ್ಪಿದೆ ಎನ್ನಲಾಗಿದೆ.

ಪೆಟ್ರೋಲ್ ಸೋರಿಕೆ ತಡೆದು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ ಟ್ಯಾಂಕರ್ ಮೇಲೆತ್ತಿ ಭಾರೀ ಅನಾಹುತ ತಪ್ಪಿಸಿದ್ದಾರೆ. ಈ ಘಟನೆಯು ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

RELATED ARTICLES  ಮಂಗನ ಕಾಯಿಲೆಗೆ ಮೊದಲ ಬಲಿ.