ಅಂಕೋಲಾ: ಕಾಡು ಪ್ರಾಣಿಗಳು ಹಾಗೂ ಹಾವು ಹುಳ ಹುಪ್ಪಡಿಗಳಿಂದ ಅಪಾಯಗಳು ಎದುರಾಗಿರುವ ಸಂದರ್ಭಗಳು ಅನೇಕವಿದೆ. ಹಾರವಾಡ ಗ್ರಾಮದ ಒಕ್ಕಲಕೋರಿ ಸರ್ಕಾರಿ ಪ್ರಾಥಮಿಕ ಶಾಲೆಯ ಅಡಿಗೆ ಕೋಣೆಯಲ್ಲಿ ನಾಗರಹಾವನ್ನು ಕಂಡು ಮಕ್ಕಳು ಭಯಭೀತರಾದ ಘಟನೆ ಜರುಗಿದೆ.
ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಯಗೊಂಡಿದ್ದರು ಸುತ್ತಮುತ್ತಲಿನ ಜನರು ಸಹ ಅದೇ ಸಂದರ್ಭದಲ್ಲಿ ಘಟನೆ ಬಗ್ಗೆ ತಿಳಿದು, ಧಾವಿಸಿ ಬಂದಿದ್ದಾರೆ ಎನ್ನಲಾಗಿದೆ. ನಂತರ ಗ್ರಾ.ಪಂ. ಸದಸ್ಯ ಸುಭಾಸ ನಾಯ್ಕ ಉರಗಪ್ರೇಮಿ ಮಹೇಶ ನಾಯ್ಕರನ್ನು ಕರೆಯಿಸಿ ಹಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.