ಪಿಎಫ್ಐ ಹಾಗೂ ಇತರೆ ಅಂಗ ಸಂಸ್ಥೆಗಳನ್ನು ಕೇಂದ್ರದ ಗೃಹ ಸಚಿವಾಲಯ ನಿಷೇಧ ಮಾಡಿರುವುದು ಅತ್ಯಂತ ಸ್ವಾಗತಾರ್ಹ. ಈ ದಿಟ್ಟ ಕ್ರಮವನ್ನು ತೆಗೆದುಕೊಂಡಿರುವ ಸನ್ಮಾನ್ಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಹಾಗೂ ಮಾನ್ಯ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರಿಗೆ ಧನ್ಯವಾದಗಳು ಎಂದು ಬಿಜೆಪಿ ಉತ್ತರ ಕನ್ನಡದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಹೇಳಿದ್ದಾರೆ.

RELATED ARTICLES  ಕ್ಯಾಮರಾದಲ್ಲಿ ಬೈಕ್ ನಂಬರ್ ನೊಂದಣಿಯಾದ್ರೆ ಪೈನ್ ಗ್ಯಾರಂಟಿ : ಅದು ಹೇಗೆ ಗೊತ್ತೇ?

ಪಿಎಫ್ಐ ಸಂಘಟನೆ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಅನೇಕ ಹತ್ಯೆ, ಹಿಂಸಾತ್ಮಕ ಘಟನೆಗಳಿಗೆ ಕಾರಣವಾಗಿತ್ತು. ಕಾನೂನು – ಸುವ್ಯವಸ್ಥೆ ಹದಗೆಡಿಸುವ ಮತ್ತು ಸಮಾಜ ಒಡೆಯುವ ವಿಚ್ಛಿದ್ರಕಾರೀ ಶಕ್ತಿಗಳನ್ನು ಮಟ್ಟಹಾಕಲು ಕೇಂದ್ರದ ಬಿಜೆಪಿ ಸರ್ಕಾರ ಅತ್ಯಂತ ಸೂಕ್ತ ಕ್ರಮವನ್ನು ಕೈಗೊಂಡಿದೆ.

ವಾರದ ಹಿಂದೆ ನೂರಕ್ಕೂ ಹೆಚ್ಚು ಪಿಎಫ್ಐ ಕಾರ್ಯಕರ್ತರನ್ನು ಬಂಧನಕ್ಕೆ ಒಳಪಡಿಸಲಾಗಿದೆ. ಅವರು ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿರುವುದಕ್ಕೆ ಮತ್ತಷ್ಟು ಪುರಾವೆ ಲಭಿಸಿದೆ. ಎಲ್ಲೆಡೆ ತನ್ನ ಜಾಲವನ್ನು ವಿಸ್ತರಿಸುವ, ಭಯೋತ್ಪಾದಕ ಕೃತ್ಯವೆಸಗುವ ಹುನ್ನಾರ ಹೊಂದಿದ್ದ ಪಿಎಫ್ಐ ಮತ್ತು ಇತರ ಅಂಗಸಂಸ್ಥೆಗಳ ಹೆಡೆಮುರಿ ಕಟ್ಟುವ ಕೇಂದ್ರ ಸರ್ಕಾರದ ಈ ದಿಟ್ಟ ಕ್ರಮವನ್ನು ಸಮಸ್ತ ದೇಶವಾಸಿಗಳು ಬೆಂಬಲಿಸುತ್ತಾರೆಂದು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

RELATED ARTICLES  ಉತ್ತರಕನ್ನಡ ಜಿಲ್ಲಾ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರಿ ಸಂಘದ ಚುನಾವಣೆ : ಕವಲಕ್ಕಿ ರವಿ ಕೆ. ಶೆಟ್ಟಿ ಹಾಗೂ ಅವರ ಬೆಂಬಲಿಗರಿಗೆ ಗೆಲುವು