ಭಟ್ಕಳ: ಪಟ್ಟಣದ ಬೆಳಲಖಂಡ ಗ್ರಾಮದಲ್ಲಿ ಮೇವು ತಿನ್ನಲು ಬಂದ ವೇಳೆ ಆಕಸ್ಮಿಕವಾಗಿ ಕಾಲುಜಾರಿ ತೆರೆದ ಬಾವಿಗೆ ಬಿದ್ದಿದ್ದ ಮೂರು ಎಮ್ಮೆಗಳನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಎಮ್ಮೆಗಳು ಬಿದ್ದಿದ್ದನ್ನು ಗಮನಿಸಿದ ಸ್ಥಳೀಯ ಶೇಷಗಿರಿ ನಾಯ್ಕ, ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಿ- ದ್ದರು.

RELATED ARTICLES  ಬಸ್ ಸಮಯ ಬದಲಾವಣೆಗೆ ವಿರೋಧ : ಬಸ್ ತಡೆದು ಪ್ರತಿಭಟನೆ

ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಠಾಣಾಧಿಕಾರಿ ಎಸ್. ರಮೇಶ, ಸಿಬ್ಬಂದಿಗಳೊಡನೆ ತೆರಳಿ ಸಾರ್ವಜನಿಕ ಸಹಾಯ ಪಡೆದು ಜಲವಾಹನದ ಹಗ್ಗ ಹಾಗೂ ಹೋಸ್‌ಗಳ ಸಹಾಯದಿಂದ ಎಮ್ಮೆಗಳನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಣೆ ಮಾಡಿದ್ದಾರೆ.

RELATED ARTICLES  ಕಣ್ಮರೆಯಾದ ಓರ್ವ ಪ್ರವಾಸಿಗ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ, ಎಸ್‌ಡಿಆರ್‌ಆಫ್‌ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.