ಭಟ್ಕಳ- ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂದಿಯವರ ಭಾರತ್ ಜೋಡೋ ಬ್ರಹತ್ 3570 ಕಿಲೋಮೀಟರ್ ಪಾದಾಯಾತ್ರೆ ಪ್ರವೇಶಿಸಿದರ ಪ್ರಯುಕ್ತ ರಾಹುಲ್ ಗಾಂಧಿಯವರಿಗೆ ಕರ್ನಾಟಕ ಪ್ರವೇಶಕ್ಕೆ ಸ್ವಾಗತ ಕೋರಿ ಶುಕ್ರವಾರ ಭಟ್ಕಳದಲ್ಲಿ ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ ನ ಕಾರ್ಯಕರ್ತರು ಮಾಜಿ ಶಾಸಕ ಜೆ.ಡಿ.ನಾಯ್ಕ್ ನೇತೃತ್ವದಲ್ಲಿ ಬ್ರಹತ್ ಬೈಕ್ ಜಾಥಾ ನಡೆಸಿದರು. ಭಟ್ಕಳದ ಗೋರಟೆ ಕ್ರಾಸ್ ಇಂದ ಆರಂಭಗೊಂಡ ಬೈಕ ಜಾಥಾ ಭಟ್ಕಳದ ಸರ್ಕಲ್ನಲ್ಲಿ ಜಮಾಗೊಂಡು ಕಾಂಗ್ರೆಸ್ ಹಿರಿಯ ಮುಖಂಡ ರಾಮಾ ಮೊಗೇರ್ ಮಾತನಾಡಿ ದೇಶದಲ್ಲಿ ಮೋದಿ ನೇತೃತ್ವದ ಕೇದ್ರ ಸರಕಾರ ಜನರ ದಿನಬಳಕೆ ಸಾಮಾಗ್ರಿಗಳ ದರ ಹೆಚ್ಚಿಸಿದೆ, ಪೆಟ್ರೋಲ್ ದರ, ಡಿಸೇಲ್ ದರ ಹೆಚ್ಚಿಸಿದೆ. ತಮ್ಮ ಸರ್ಕಾರದ ದುರಾಡಳಿತದಿಂದ ಜನರ ಗಮನ ಬೇರೆ ಕಡೆ ಸೆಳೆಯಲು ಈಗ ದೇಶದ ಜನರ ಮಧ್ಯೆ ಹಿಂದೂ ಮತ್ತು ಮುಸ್ಲಿಂ ಧರ್ಮದ ಆಧಾರದಲ್ಲಿ ಜನರ ಭಾವನೆ ಕೆರಳಿಸಿ ಈ ದೇಶದ ಜನರನ್ನು ವಿಭಜಿಸಿ ರಾಜಕಾರಣ ಮಾಡಿ ಜನರನ್ನು ಮೂರ್ಖರನ್ನಾಗಿಸಲು ಹೊರಟಿದೆ ಎಂದು ಗುಡುಗಿದರು.
ಈಗ ನಮ್ಮ ನಾಯಕ ರಾಹುಲ್ ಗಾಂಧಿಯವರು ತಮಿಳುನಾಡಿನ ಕನ್ಯಾಕುಮಾರಿ ಇಂದ ಬ್ರಹತ್ 3570 ಕಿಲೋಮೀಟರ್ ಪಾದಯಾತ್ರೆಮಾಡಿ
ದೇಶ ವಿವಿದೆಡೆ ಸಂಚರಿಸಿ ಈ ಜನರನ್ನು , ದೇಶವನ್ನು ಒಂದೂಗುಡಿಸಲು ಹೊರಟಿದ್ದಾರೆ ಎಂದು ತಿಳಿಸಿದರು.ನಂತರ ಜಾಥಾ ಬೈಲೂರು ಕ್ರಾಸ್ ವರೆಗೆ ಮುಂದುವರಿದು, ಬೈಲೂರು ಕ್ರಾಸ್ ಹತ್ತಿರ ಅಂತ್ಯಗೊಂಡಿತು.ಬೈಕ ಜಾಥದಲ್ಲಿ ನೂರಾರು ಬೈಕಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಡಿ ನಾಯ್ಕ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ್, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಶ್ರೀಧರ್ ನಾಯ್ಕ್ ಕೈಕಿಣಿ, ಮಹೇಶ್ ನಾಯ್ಕ್, ನಾಗೇಶ್ ದೇವಾಡಿಗ, ವಿಷ್ಣು ದೇವಾಡಿಗ, ಮಂಜುನಾಥ್ ನಯ್ಕ್ ಮುಂಡಳ್ಳಿ , ಸಯ್ಯದ್ ಅಲಿ ಮಾಲಿಕೆ, ಲೋಕೇಶ್ ನಾಯ್ಕ್ , ಸಚಿನ್ ನಾಯ್ಕ್ ಬಸ್ತಿ, ನಾರಾಯಣ್ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.