ಮಂಗಳೂರು : ಪರೇಲ್ ಎಲ್ಫಿನ್‍ಸ್ಟನ್ ರೈಲ್ವೇ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ದಕ್ಷಿಣ ಕನ್ನಡ ಮೂಲದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮೃತರನ್ನು ಮುಂಬೈಯ ಬಂಟ ಸಂಘದ ಕುರ್ಲಾ ಭಾಂಡೂಪ್ ಪ್ರಾದೇಶಿಕ ಸಮಿತಿ ಸದಸ್ಯೆಯರಾದ ಸುಜಾತಾ ಪಿ.ಆಳ್ವ (42) ಸುಮಲತಾ ಸಿ.ಶೆಟ್ಟಿ (45) ಎಂದು ಗುರುತಿಸಲಾಗಿದೆ.

ಸುಜಾತಾ ಪಿ.ಆಳ್ವ ಮತ್ತು ಸುಮಲತಾ ಸಿ.ಶೆಟ್ಟಿ ಮಂಗಳೂರು ನೆಹರೂ ನಗರ ನಿವಾಸಿಗಳಾಗಿದ್ದು. ದಸರಾ ಹಬ್ಬದ ಪೂಜೆಗೆ ಹೂವು ಖರೀದಿಸಲೆಂದೇ ಹೋದವರು ಈ ಅವಘಡದಲ್ಲಿ ಮೃತಪಟ್ಟಿದ್ದಾರೆ.ಸುಮಲತಾ ಶೆಟ್ಟಿ ಅತ್ಯುತ್ತಮ ಕ್ರೀಡಾಪಟುವಾಗಿದ್ದರು. ಪತಿ ಎಳಿಯಾಲು ಶೆಟ್ಟಿ ಬೆಟ್ಟುಮನೆತನದ ಚಂದ್ರಶೇಖರ್ ಶೆಟ್ಟಿ ಸೀಮೆನ್ಸ್ ಉದ್ಯೋಗಿಯಾಗಿದ್ದು, ಏಕೈಕ ಪುತ್ರಿ ನಿಧಿ ಶೆಟ್ಟಿ ಸಯಾನ್‍ನಲ್ಲಿ ಬಿಎಸ್ಸಿ ಓದುತ್ತಿದ್ದಾರೆ.

RELATED ARTICLES  ನನ್ನ ಹೆಸರನ್ನು ಹಾಕಿದರೆ ವೇದಿಕೆಯಲ್ಲೇ ಟಿಪ್ಪು ಇತಿಹಾಸವನ್ನು ಜಾಲಾಡಿ ಬಿಡುತ್ತೇನೆ!

ವಾಮಂಜೂರು ಮೂಲದವರಾದ ಸುಜಾತಾ ಆಳ್ವ ಅತ್ಯುತ್ತಮ ರಂಗಭೂಮಿ ಕಲಾವಿದೆ. ಇವರ ಪತಿ ಪುರುಷೋತ್ತಮ ಆಳ್ವ ಆದಾಯ ತೆರಿಗೆ ಉನ್ನತಾಧಿಕಾರಿಯಾಗಿದ್ದು ಮತ್ತು ಇಬ್ಬರು ಪುತ್ರಿಯರಾದ ಪ್ರಜ್ಞಾ ಆಳ್ವ ಮತ್ತು ಪ್ರೇರಣಾ ಆಳ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಮೈಸೂರು ಅಸೋಸಿಯೇಶನ್‍ನ ಸಭಾಗೃಹದಲ್ಲಿ ಪ್ರದರ್ಶನಗೊಂಡ ದಯಾನಂದ್ ಸಾಲ್ಯಾನ್ ರಚಿಸಿ ನಿರ್ದೇಶಿಸಿದ ಅಬ್ಬ’ ಕನ್ನಡ ನಾಟಕದಲ್ಲಿ ಸುಜಾತ ಪಾತ್ರ ನಿರ್ವಹಿಸಿದ್ದರು.

RELATED ARTICLES  ಎಲ್ಲ ತುರ್ತು ಸೇವೆಗೆ ಒಂದೇ ಸಂಖ್ಯೆ

ಶಾರ್ಟ್ ಸರ್ಕ್ಯೂಟ್ ಆಗಿದೆ ಎಂಬ ಸುಳ್ಳು ವದಂತಿ ಹಿನ್ನೆಲೆಯಲ್ಲಿ ಜನರ ಭಾರೀ ತಳ್ಳಾಟ, ನೂಕಾಟದಿಂದಾಗಿ ಸಂಭವಿಸಿದ ಕಾಲ್ತುಳಿತಕ್ಕೆ 22 ಮಂದಿ ಬಲಿಯಾಗಿದ್ದರು.