ಭಟ್ಕಳ : ಮನೆಯವರು ಸಂಬಂಧಿಕರ ಮನೆಯ ಔತಣಕೂಟಕ್ಕೆ ಹೋಗಿ ಬರುವಷ್ಟರ ಒಳಗೆ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣಗಳನ್ನ ಕಳ್ಳತನವನ್ನ ಮಾಡಿದ ಘಟನೆ ತಾಲೂಕಿನ ಪಟ್ಟಣದ ರಹಮತಾಬಾದಿನಲ್ಲಿ ನಡೆದಿದೆ.

ಅಬ್ದುಲ್ ಅಜೀಜ್ ಅಜಾಯಿಬ್ ಎಂಬುವವರ ಕುಟುಂಬದವರು ರಾತ್ರಿ 8:45 ರ ಸುಮಾರಿಗೆ ಸಂಬಂಧಿಕರ ಮನೆಗೆ ಹೋಗಿ ಮೂರು ಗಂಟೆಗಳಲ್ಲಿ ಹಿಂತಿರುಗಿ ವಾಪಾಸ್ ಬಂದಾಗ ಮನೆಯ ಹಿಂಬಾಗಿಲು ಮತ್ತು ಫೈಬರ್ ಬಾಗಿಲು ಮುರಿದಿರುವುದು ಕಂಡು ಶಾಕ್ ಆಗಿದ್ದಾರೆ. ನಂತರ ಗಾಬರಿಗೊಂಡ ಮನೆಯವರು ಮನೆಯ ವಸ್ತುಗಳ ಬಗ್ಗೆ ಗಮನಿಸಿದ್ದಾರೆ. ಆಗ ಕಬೋರ್ಡಿನಲ್ಲಿ ಇಟ್ಟಿದ್ದ ಬ್ಯಾಗಿನಿಂದ ಆಭರಣಗಳು ಕಳ್ಳತನವಾಗಿರುವ ಬಗ್ಗೆ ತಿಳಿದಿದೆ ಎನ್ನಲಾಗಿದೆ.

ಕಳ್ಳರು ಕಬ್ಬಿಣದ ರಾಡ್ ಸಹಾಯದಿಂದ ಮನೆಯ ಹಿಂಬಾಗಿಲನ್ನು ತೆರೆಯಲು ಯತ್ನಿಸಿದ್ದಾರೆ. ನಂತರ ಕಳ್ಳರು ಒಳಗೆ ಪ್ರವೇಶಿಸಿ ಫೈಬರ್ ಬಾಗಿಲು ಮುರಿದು ಒಳ ಪ್ರವೇಶಿಸಿದ್ದಾರೆ.

RELATED ARTICLES  ವಿದ್ಯಾರ್ಥಿಗಳಿಗೊಂದು ಶುಭ ಸುದ್ದಿ; ಇನ್ನು ಮಣಭಾರದ ಬ್ಯಾಗ್ ಹೊತ್ತು ಸಾಗುವ ಅಗತ್ಯವಿಲ್ಲ

ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಶುಕ್ರವಾರ ಕಾರವಾರದಿಂದ ಬೆರಳಚ್ಚು ತಜ್ಞರೊಂದಿಗೆ ಶ್ವಾನದಳದೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸರ್ಕಲ್ ಇನ್ಸ್ ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಪಿಎಸ್ ಐ ಭರತ್ ಮತ್ತಿತರ ಅಧಿಕಾರಿಗಳು ಅಗತ್ಯ ಮಾಹಿತಿ ಪಡೆದುಕೊಂಡಿದ್ದು, ತನಿಖೆ ನಡೆಸಿದ್ದಾರೆ.

RELATED ARTICLES  ಜಾತ್ರೆಗೂ ಬಂದ ಕಾಂತಾರದ ಪಂಜುರ್ಲಿ..!