ಕುಮಟಾ: ಇಲ್ಲಿನ ಹೊಳೆಗದ್ದೆಯ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಶರನ್ನವರಾತ್ರಿ ನಿಮಿತ್ತ ಸ್ವರಾಂಗಣ ಟ್ರಸ್ಟಿನವರು ಗಾನ-ನಾಟ್ಯ ವೈಭವ ಅನ್ನುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅಕ್ಟೋಬರ 3ರಂದು ಸಂಜೆ 4 ಗಂಟೆಗೆ ಆಯೋಜಿಸಿದ್ದಾರೆ. ಇದೇ ಸಮಯದಲ್ಲಿ ಸ್ವರಾಂಗಣ ಅನ್ನುವ ಸಾಂಸ್ಕೃತಿಕ ಟ್ರಸ್ಟಿನ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಇದರ ಅಧ್ಯಕ್ಷತೆಯನ್ನು ಡಾ.ಡಿ.ಡಿ.ಭಟ್ಟ ಕಮಲಾ ಬಾಳಿಗಾ ಕಾಲೇಜ್ ಕುಮಟಾ ಇವರು ವಹಿಸಲಿದ್ದು, ಇದರ ಉದ್ಘಾಟನೆಯನ್ನು ಖ್ಯಾತ ಹಿಂದುಸ್ತಾನಿ ಸಂಗೀತ ಕಲಾವಿದ ವಿದ್ವಾನ. ಶಿವಾನಂದ ಭಟ್ಟ ರಾಗಶ್ರೀ ಅಧ್ಯಕ್ಷರು ಹಡಿನಬಾಳ ಇವರು ನೆರವೇರಿಸಲಿದ್ದಾರೆ.

RELATED ARTICLES  ಕುಮಟಾದಲ್ಲಿ ಕಾಂಗ್ರೆಸ್ ಪ್ರಮುಖರಿಂದ ಬೈಕ್ ರ್ಯಾಲಿ..!

ಮುಖ್ಯ ಅತಿಥಿಗಳಾಗಿ ಶ್ರೀ ಎಂ.ಜಿ.ಭಟ್ಟ, ಬಿ.ಜೆ.ಪಿ. ಪ್ರಭಾರಿ ಯುವ ಮೋರ್ಚಾ ಉ.ಕ. ಹಾಗೂ ಶ್ರೀ ಎ.ಅರ್.ಭಟ್ಟ,ನಿವೃತ್ತ ಪ್ರೌಢಶಾಲಾ ಮುಖ್ಯಾಧ್ಯಾಪಕರು ಬೆತ್ತಗೇರಿ ಆಗಮಿಸಲಿದ್ದಾರೆ. ನಂತರದಲ್ಲಿ ಕುಮಾರಿ.ಭಾಗ್ಯಲಕ್ಷ್ಮಿ ಭಟ್ಟ, ರಂಜಿತಾ ನಾಯ್ಕ, ನೇಹಾ ಸುರೇಶ ಭಟ್ಟ, ಶಿಲ್ಪಾ.ಡಿ.ಭಟ್ಟ ಇವರಿಂದ ಸಂಗೀತ ನಡೆಯಲಿದೆ. ಕೆ.ರಾಜೇಶ್ವರಿ ಭಟ್ಟ ಕುಮಟಾ ಇವರಿಂದ ಭರತನಾಟ್ಯ ನಡೆಯಲಿದೆ.

ಇದನ್ನೂ ಓದಿ – ಸಂಬಂಧಿಕರ ಮನೆಯ ಔತಣಕೂಟಕ್ಕೆ ಹೋಗಿ ಬಂದು ನೋಡಿದ ಮನೆಯವರಿಗೆ ಕಾದಿತ್ತು ಶಾಕ್..!

ನಂತರದಲ್ಲಿ ಖ್ಯಾತ ಕಲಾವಿದರಾದ ವಿದ್ವಾನ. ಶಿವಾನಂದ ಭಟ್ಟ ಹಡಿನಬಾಳ ಇವರಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತ ನಡೆಯಲಿದೆ. ಇವರಿಗೆ ಖ್ಯಾತ ಆಕಾಶವಾಣಿ ತಬಲಾ ವಾದಕರಾದ ವಿದ್ವಾನ ಶೇಷಾದ್ರಿ ಅಯ್ಯಂಗಾರ್ ಮಂಕಿ, ವಿನಾಯಕ ಭಟ್ಟ ಹರ್ಡಸೆ ತಬಲಾ ಸಾಥನ್ನು, ಶ್ರೀ ಹರಿಶ್ಚಂದ್ರ ನಾಯ್ಕ ಸಂವಾದಿನಿ ಸಾಥನ್ನು ನೀಡಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಶೋತೃಗಳು ಆಗಮಿಸುವಂತೆ ಸ್ವರಾಂಗಣದ ಅಧ್ಯಕ್ಷರಾದ ಶ್ರೀ ಮಂಜುನಾಥ ರಾಮಚಂದ್ರ ಹೆಗಡೆ ಹಾಗೂ ಕಾರ್ಯದರ್ಶಿ ಪ್ರವೀಣ ಗಣಪತಿ ಹೆಗಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.