ಜೊಯಿಡಾ : ಕಾಡುಪ್ರಾಣಿಗಳು ಊರಿಗೆ ಬರುತ್ತಿದ್ದು ಜನರ ಮೇಲೆ ದಾಳಿ ಮಾಡುತ್ತಿವೆ. ಉತ್ತರ ಕನ್ನಡದ ಅರಣ್ಯ ಪ್ರದೇಶಗಳಲ್ಲಿ ಇಂತಹ ಪ್ರಾಣಿಗಳ ಉಪಟಳ ಹೆಚ್ಚುತ್ತಿದ್ದು, ಜನತೆ ಈ ಬಗ್ಗೆ ಭಯದ ನೆರಳಿನಲ್ಲಿ ಬದುಕುವಂತಾಗಿದೆ. ಇದೀಗ ಮತ್ತೆ ಅಂತಹುದೇ ಪ್ರಕರಣ ಒಂದು ವರದಿಯಾಗಿದ್ದು, ಮನೆಯ ಸಮೀಪದಲ್ಲಿ ಮೇಯಲು ಹೊಗಿದ್ದ ದನಕರುಗಳನ್ನು ತರುತ್ತಿರುವ ವೇಳೆ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಬಾಪೇಲಿ ಗ್ರಾಮದಲ್ಲಿ ನಡೆದಿದೆ.

RELATED ARTICLES  ಯಕ್ಷಗಾನ ಕಲಾವಿದೆ ತುಳಸಿ ಹೆಗಡೆಗೆ ಸನ್ಮಾನ

ಕಾಳು ಬಾಬು ಪಾಟೀಲ ಎಂಬಾತನೇ ಗಾಯಗೊಂಡ ವ್ಯಕ್ತಿ. ಹುಲ್ಲು ಮೇಯಲು ಹೊಗಿದ್ದ ತನ್ನ ಸಾಕು ದನಕರುಗಳನ್ನು ತರುತ್ತಿರುವ ವೇಳೆ ಎರಡು ಮರಿಗಳೊಂದಿಗೆ ಇದ್ದ ಕರಡಿ ಈತನ ಮೇಲೆ ಎರಗಿ ಕೈ ಬೆರಳಿಗೆ ಕಚ್ಚಿ ಗಾಯಗೊಳಿಸಿದ್ದು, ಈತ ಕೆಳಗೆ ಬಿದ್ದು ಕೂಗಿಕೊಂಡಾಗ ಕರಡಿ ಕಾಡಿಗೆ ತನ್ನ ಮರಿಗಳೊಂದಿಗೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.

RELATED ARTICLES  ಬೀಟ್ ಗೆ ಹೋದ ಅರಣ್ಯಾಧಿಕಾರಿ ಮೇಲೆ ಮಾರಾಣಾಂತಿಕ ಹಲ್ಲೆ…!

ಇದನ್ನೂ ಓದಿ – ಶಾಲೆಯ ಅಡುಗೆ ಕೋಣೆಯಲ್ಲಿ ಕಾಣಿಸಿಕೊಂಡಿತು ನಾಗರಹಾವು..! ಜನರು ಕಂಗಾಲು..!

ನಂತರ ಅರಣ್ಯ ಇಲಾಖೆಯ ಡಿ ಆರ್ ಎಪ್ ಓ ವಿಠ್ಠಲ ಗುಬಚೆ ಮತ್ತು ಗಾರ್ಡ ಪ್ರಶಾಂತ ಬಾಗಿ ಇವರು ಜೊಯಿಡಾ ತಾಲೂಕಾ ಆಸ್ಪತ್ರೆಗೆ ಗಾಯಗೊಂಡ ವ್ಯಕ್ತಿಯನ್ನು ತಂದು ಚಿಕಿತ್ಸೆ ಕೊಡಿಸಿದ್ದಾರೆ.