ಕಾರವಾರ: ದೇಶದ ಇತರ ಭಾಗಗಳಲ್ಲಿ ಹರಡಿದ ಮಕ್ಕಳ ಕಳ್ಳರ ಸುಳ್ಳು ಸುದ್ದಿ ಉತ್ತರ ಕನ್ನಡದ ವಿವಿಧ ತಾಲೂಕಿನಲ್ಲಿಯೂ ಕೇಳಿ ಬಂದಿತ್ತು, ಈ ಮಕ್ಕಳ ಕಳ್ಳರ ಸುದ್ದಿ ನಗರ ಜನರನ್ನು ಬೆಚ್ಚಿ ಬೀಳಿಸುವ ಜೊತೆಗೆ ಸುತ್ತಮುತ್ತಲಿನ ನಾಗರಿಕರು ಬೆಚ್ಚಿ ಬೀಳುವಂತೆ ಮಾಡಿತ್ತು. ನಗರದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವ ವದಂತಿ ಹಬಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಪೊಲೀಸ್ ಪ್ರಕಟಣೆ ನೀಡಿದ್ದಾರೆ. ಇದರಿಂದಾಗಿ ಜನತೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

RELATED ARTICLES  ಭಾವಚಿತ್ರಕ್ಕೆ ಎಂಜಲು ಉಗಿದು, ಚಪ್ಪಲಿಯಲ್ಲಿ ಹೊಡೆದು ಆಕ್ರೋಶ...!

ಗುರುವಾರ ನಗರದ ದಿವೇಕರ ವಾಣಿಜ್ಯ ಕಾಲೇಜಿನ ಸಮೀಪ ಮೂವರು ಯುವಕರು ಒಬ್ಬ ಯುವಕನನ್ನು ಹಿಂಬಾಲಿಸಿದ್ದಾರೆ ಎಂದು ವದಂತಿ ಹಬ್ಬಿದ್ದು, ಈ ನಾಲ್ವರನ್ನು ಠಾಣೆಗೆ ಕರೆಯಿಸಿ ವಿಚಾರಿಸಿದ್ದು ಎಲ್ಲರೂ ಪರಿಚಯದವರಾಗಿದ್ದಾರೆ.

ಇದನ್ನೂ ಓದಿ – ಬೆಳ್ಳಂಬೆಳಗ್ಗೆ ಭೀಕರ ಅಪಘಾತ : 20ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲು : ಬಸ್ ಹಾಗೂ ಟ್ಯಾಂಪೋ ನಡುವೆ ಅಪಘಾತ.

RELATED ARTICLES  ಕುಮಟಾದ ಆಭರಣ ಚಿನ್ನಾಭರಣ ಮಳಿಗೆ ಮೇಲೆ ಐ.ಟಿ ದಾಳಿ?

ರಾತ್ರಿ ದಾಂಡಿಯಾ ಮುಗಿಸಿಕೊಂಡು ಹೋಗುವಾಗ ಹಳೆ ದ್ವೇಷದ ಹಿನ್ನೆಲೆಯಲ್ಲಿ ಒಬ್ಬ ಯುವಕನನ್ನು ಮೂವರು ಹಿಂಬಾಲಿಸಿದ್ದರು. ನಗರದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವುದು ಸುಳ್ಳಾಗಿದ್ದು, ಸಾರ್ವಜನಿಕರು ಭಯಪಡುವ ಅವಶ್ಯಕತೆಯಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.