ಶಿರಸಿ: ತಂದೆಯೊರ್ವ 12ವರ್ಷದ ಬಾಲಕಿ ಮೇಲೆ ಸಿಟ್ಟಿನಿಂದ ಸಲಾಕೆಯಿಂದ ಹೊಡೆದು ತೀವ್ರ ವಾಗಿ ಗಾಯಪಡಿಸಿದ ಘಟನೆ ತಾಲೂಕಿನ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯ ಹಳೇ ಉಂಚಳ್ಳಿ ಯಲ್ಲಿ ನಡೆದಿದೆ ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.

RELATED ARTICLES  ಅನಂತಕುಮಾರ ಹೆಗಡೆ ಭೇಟಿಗೆ ಕಾದು ಕಾದು ವಾಪಸ್ಸಾದ ಕಾಗೇರಿ?

ಮಗಳು ಶಾಲೆಯಿಂದ ಬಂದ ಮೇಲೆ ಏನೂ ಕೆಲಸ ಮಾಡುವುದಿಲ್ಲ ಎಂದು ಸಿಟ್ಟಿಗೆದ್ದು ಮನೆಯ ಮೂಲೆಯಲ್ಲಿದ್ದ ಸಲಾಕೆಯನ್ನು ತಂದು ಆಕೆಯ ತಲೆಗೆ ಬಡಿದ ಹಿನ್ನೆಲೆಯಲ್ಲಿ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ – ಭಾರತದಲ್ಲಿ 5G ಜಮಾನ : ನಿಮ್ಮ ಮೊಬೈಲ್ ನಲ್ಲಿಯೂ ಈ ಸೆಟ್ಟಿಂಗ್ ಇದೆಯಾ ನೋಡಿ.

RELATED ARTICLES  ಭೀಕರ ಅಪಘಾತ : ಓರ್ವ ಸಾವು.

ಬಾಲಕಿಯನ್ನು ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ಬಾಲಕಿಯ ತಾಯಿ ಬನವಾಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪಿಎಸ್‌ಐ ಹನುಮಂತ ಬೀರಾದಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.