ಶಿರಸಿ: ಕಾರ್ ಸೇಲ್‌ಸೆಂಟ‌ರ್ ಪಕ್ಕದ ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದನ್ನು ಕಳ್ಳರು ಕದ್ದೊಯ್ದ ಘಟನೆ ನಗರದ ಹುಬ್ಬಳ್ಳಿ ರಸ್ತೆಯ ಡಾನ್‌ಬೋಸ್ಕೋ ಶಾಲೆಯ ಸಮೀಪ ನಡೆದಿದೆ ಎಂದು ವರದಿಯಾಗಿದೆ.

ಸುಬಾನಮಗ್ಗುಲ ಅಹ್ಮದ್‌ ಅವರಂಗ ಅವರ ಬೈಕ್ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿದೆ. ಇವರು ಹುಬ್ಬಳ್ಳಿ ರಸ್ತೆ ಯಲ್ಲಿರುವ ಜಬಿವುಲ್ಲಾ ಅವರ ಕಾರ್ ಸೇಲ್‌ಗೆ ಕೆಲಸಕ್ಕೆ ಹೋಗುವಾಗ ಅಲ್ಲಿ ಪಕ್ಕದ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು ಎನ್ನಲಾಗಿದೆ.

RELATED ARTICLES  ಟಿಕೆಟ್ ಕೈತಪ್ಪಿದ ನಂತರ ಜನತೆಗೆ ಭಾವುಕವಾಗಿ ಬರೆದ ಪತ್ರ ಹಂಚಿಕೊಂಡ ಅನಂತಕುಮಾರ ಹೆಗಡೆ

ಈ ಸುದ್ದಿಯನ್ನೂ ಓದಿ – ಕಾಣಿಸಿಕೊಂಡಿದೆ ವಿಚಿತ್ರವಾದ ಜ್ವರ : ಈ ವೈರಸ್ ಬಗ್ಗೆ ಎಚ್ಚರಿಕೆ ನೀಡಿದ ವೈದ್ಯರು.

ಅವರು ಕೆಲಸ ಮುಗಿಸಿಕೊಂಡು ಸಂಜೆ ಬಂದು ನೋಡಿದಾಗ ಬೈಕ್ ಇರಲಿಲ್ಲ.ಈ ಕುರಿತು ಮಾರುಕಟ್ಟೆ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಕಾರ್ಯಾಚರಣೆಯ ನಂತರ ಪೂರ್ಣ ಮಾಹಿತಿ ಹೊರಗೆ ಬರಬೇಕಿದೆ.

RELATED ARTICLES  ಕನ್ಯೆಯರು ವಿವಾಹವಾಗದೇ ತೊಂದರೆಯನ್ನು ಅನುಭವಿಸುತ್ತಿದ್ದರೆ ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ!