ಶಿರಸಿ: ದಾವಣಗೆರೆಯ ಕೊಂಡಜ್ಜಿ ಬಸಪ್ಪ ತರಬೇತಿ ಕೇಂದ್ರದಲ್ಲಿ ನಡೆದ, 2022-23 ನೇ ಸಾಲಿನ ರಾಜ್ಯಪುರಸ್ಕಾರ ಪದಕ ತರಬೇತಿ ಪರೀಕ್ಷೆಯಲ್ಲಿ, ಶಿರಸಿ ಲಯನ್ಸ್ ಶಾಲೆಯ 3 ಸ್ಕೌಟ್ಸ್ ಮತ್ತು 4 ಗೈಡ್ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದು, ಅದರಲ್ಲಿ ಸ್ಕೌಟ್ಸ್ ವಿಭಾಗದ ವಿದ್ಯಾರ್ಥಿಗಳಾದ ಸಂಕೇತ ಸುರೇಶ್ ವೇರ್ಣೆಕರ, ಗೌತಮ ಎಂ. ನಾಯ್ಕ, ಪ್ರಜ್ವಲ್ ಪ್ರಮೋದ ನಾಯ್ಕ, ಗೈಡ್ಸ್ ವಿಭಾಗದ ವಿದ್ಯಾರ್ಥಿನಿಯರಾದ ಇಶಾ ರವಿಕಿರಣ ಪಟವರ್ಧನ್, ಸಹನಾ ದತ್ತಾತ್ರೇಯ ಶೆಟ್ಟಿ, ಶುಭಾ ಜಗದೀಶ ಗುಡಿಗಾರ, ಶ್ರೀಲಕ್ಷ್ಮೀ ವಿ. ಹೆಗಡೆ ಈ ಎಲ್ಲಾ ವಿದ್ಯಾರ್ಥಿಗಳು ಉನ್ನತ ಶ್ರೇಣ ಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

RELATED ARTICLES  ಸೂಕ್ತ ದಾಖಲೆ ನೀಡದ ಹಿನ್ನೆಲೆ : ಹೊನ್ನಾವರದಲ್ಲಿ ಹಲವು ಅಂಗಡಿಗಳು ಸೀಜ್

ಈ ವಿದ್ಯಾರ್ಥಿಗಳಿಗೆ ಸ್ಕೌಟ್ ಮಾಸ್ಟರ ರಾಘವೇಂದ್ರ ಹೊಸೂರು ಹಾಗೂ ಗೈಡ್ಸ್ ಕ್ಯಾಪ್ಟನ್ ಚೇತನಾ ಪಾವಸ್ಕರ ತರಬೇತಿಯನ್ನು ನೀಡಿರುತ್ತಾರೆ. ಈವರೆಗೆ ಲಯನ್ಸ್ ಶಾಲೆಯಿಂದ ಸ್ಕೌಟ್ & ಗೈಡ್ಸ್ ವಿಭಾಗದಿಂದ ಒಟ್ಟೂ 33 ವಿದ್ಯಾರ್ಥಿಗಳು ಕರ್ನಾಟಕದ ಘನತೆವೆತ್ತ ರಾಜ್ಯಪಾಲರಿಂದ ರಾಜ್ಯಪುರಸ್ಕಾರವನ್ನು ಪಡೆಯಲು ಯಶಸ್ವಿಯಾಗಿರುವುದು ಶಿರಸಿ ಲಯನ್ಸ ಶಾಲೆಯ ಐತಿಹಾಸಿಕ ಸಾಧನೆಯಾಗಿರುತ್ತದೆ. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಶಿಕ್ಷಕ-ಶಿಕ್ಷಕೇತರ ಬಾಂಧವರು, ಲಯನ್ಸ್ ಬಳಗ ಮತ್ತು ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.

RELATED ARTICLES  ಮಲೆನಾಡಲ್ಲಿ ಧಾರಾಕಾರ ಮಳೆ..ತಗ್ಗು ಪ್ರದೇಶಗಳು ಜಲಾವೃತ