ಕಾರವಾರ ತಾಲೂಕಿನ ಬಾಂಡಿಶಿಟ್ಟಾನವರಾತ್ರಿ ಉತ್ಸವ ಸಮಿತಿ ಆಯೋಜಿಸಿದ್ದ 25ನೇ ವರ್ಷದ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಮುಲ್ಯೈ ಮುಗಿಲನ್, ಗರ್ಭಾ ನೃತ್ಯಕ್ಕೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ. ಈ ಬಾರಿ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬಾಂಡಿಶಿಟ್ಟಾನವರಾತ್ರಿ ಉತ್ಸವ ಸಮಿತಿ, ನವರಾತ್ರಿಯ ಹತ್ತು ದಿನವೂ ವಿವಿಧ ಸಾಂಸ್ಕೃತಿ ಹಾಗೂ ಸನ್ಮಾನ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ. ಈ ವರ್ಷ ಉಳಿದೆಲ್ಲ ವರ್ಷಗಳಿಗಿಂತಲೂ ಅತಿ ವಿಜೃಂಭಣೆಯಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು, ಶುಕ್ರವಾರ ರಾತ್ರಿಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮುತ್ತೈ ಮುಗಿಲನ್ ಪಾಲ್ಗೊಂಡಿದ್ದಾರೆ.

RELATED ARTICLES  ಬಿಜೆಪಿ ಮೊದಲ ಪಟ್ಟಿಯಲ್ಲಿಯೇ ಅನಂತಕುಮಾರ್ ಹೆಗಡೆ ಹೆಸರು..?
Screenshot 2022 10 01 20 27 46 11 99c04817c0de5652397fc8b56c3b3817

ಕಾರ್ಯಕ್ರಮಕ್ಕೂ ಪೂರ್ವ ಪ್ರತಿಷ್ಠಾಪಿತ ದುರ್ಗಾಮಾತೆಗೆ ನಮಸ್ಕರಿಸಿ ಬಂದ ಡಿಸಿ, ಬಳಿಕ ಸಾಂಪ್ರದಾಯಿಕ ರಾಜಸ್ಥಾನಿಗಳ ನವರಾತ್ರಿ ನೃತ್ಯವಾದ ಗರ್ಭಾ ನೃತ್ಯ ಮಾಡಿ ಗಮನ ಸೆಳೆದರು.ಸ್ಥಳೀಯರೊಂದಿಗೆ ಗರ್ಭಾ ಹಾಡುಗಳಿಗೆ
ಹೆಜ್ಜೆ ಹಾಕಿದರು. ಇನ್ನು ಇದೇ ವೇಳೆ ಪುಟ್ಟ ಮಗುವೊಂದನ್ನು ಎತ್ತಿಕೊಂಡು ಅವರು ಮುದ್ದಾಡಿದರು.

RELATED ARTICLES  ಮನುಕುಲದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಬಳಿಗೆ ನಾಸಾ ವಿಮಾನ!