ರೈಲ್ವೆ ನೇಮಕಾತಿ ಮಂಡಳಿ, ಪೂರ್ವ ರೈಲ್ವೆಯು 3115 ಆಕ್ಟ್‌ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಇದೀಗ ಅಧಿಸೂಚನೆ ಬಿಡುಗಡೆ ಮಾಡಿದೆ. ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಭರ್ಜರಿ ಉದ್ಯೋಗ ಆಫರ್ ನೀಡಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಕ್ಟೋಬರ್ 29 ರವರೆಗೆ ಅವಕಾಶ ನೀಡಲಾಗಿದೆ.

ಅಪ್ರೆಂಟಿಸ್‌ ಡಿವಿಷನ್‌ವಾರು ಹುದ್ದೆಗಳ ವಿವರ.

ಔರಾ ಡಿವಿಷನ್ : 659
ಲಿಲುಹ ವರ್ಕ್‌ಶಾಪ್‌: 612
ಸೀಲ್ದ ಡಿವಿಷನ್ : 440
ಕಂಚ್ರಪರ ವರ್ಕ್‌ಶಾಪ್‌: 187
ಮಾಲ್ಡ ಡಿವಿಷನ್ : 138
ಅಸನ್‌ಸೋಲ್ ವರ್ಕ್‌ಶಾಪ್‌: 412
ಜಮಲ್ಪುರ್ ವರ್ಕ್‌ಶಾಪ್‌ : 667

ವಿದ್ಯಾರ್ಹತೆ
ಅಭ್ಯರ್ಥಿಗಳು 10ನೇ ತರಗತಿ / ತತ್ಸಮಾನ ವಿದ್ಯಾರ್ಹತೆ ಜತೆಗೆ ಐಟಿಐ (ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್) ಪಾಸ್ ಮಾಡಿರಬೇಕು. ವಿವಿಧ ಟ್ರೇಡ್‌ನಲ್ಲಿ ವ್ಯಾಸಂಗ ಮಾಡಿದವರು ಅರ್ಜಿ ಸಲ್ಲಿಸಬಹುದು.

RELATED ARTICLES  ಉತ್ತರಕನ್ನಡದಲ್ಲಿ ಲಾಕ್ ಡೌನ್ ಸಡಿಲಿಕೆ : ಇಲ್ಲಿದೆ ಪೂರ್ಣ ಮಾಹಿತಿ

ವಯಸ್ಸಿನ ಅರ್ಹತೆ
ಅರ್ಜಿ ಸಲ್ಲಿಸಲು ನಿಗದಿತ ಕೊನೆ ದಿನಾಂಕಕ್ಕೆ ಕನಿಷ್ಠ 15 ವರ್ಷ ಆಗಿರಬೇಕು.
ಗರಿಷ್ಠ 24 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.

ಒಬಿಸಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ಪ್ರಮುಖ ದಿನಾಂಕಗಳು
ನೋಟಿಫಿಕೇಶನ್‌ ಪ್ರಕಟಿಸಲಾದ ದಿನಾಂಕ: 23-09-2022
ಆನ್‌ಲೈನ್‌ ಅರ್ಜಿಗೆ ಲಿಂಕ್ ಬಿಡುಗಡೆ ದಿನಾಂಕ: 30-09-2022

ಆನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 29-10-2022

ಪಶ್ಚಿಮ ರೈಲ್ವೆ ನೇಮಕ: ಗ್ರೂಪ್‌ ಸಿ ಹುದ್ದೆಗಳಿಗೆ 12th, ಪದವಿ ಅರ್ಹತೆ., ವೇತನ ರೂ.25,500 ರಿಂದ 81,100 ವರೆಗೆ.

RELATED ARTICLES  ಕುಮಟಾದಲ್ಲಿ ವಿದ್ಯುತ್ ವ್ಯತ್ಯಯ

ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್

ಅರ್ಜಿ ಶುಲ್ಕ ರೂ.100 ನಿಗದಿ ಮಾಡಲಾಗಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಪೂರ್ವ ರೈಲ್ವೆ ಆಕ್ಟ್ ಅಪ್ರೆಂಟಿಸ್ ಹುದ್ದೆಗಳನ್ನು ಫಿಟ್ಟರ್, ವೆಲ್ಡರ್, ಮೆಕ್ಯಾನಿಕಲ್, ಇಲೆಕ್ಟ್ರಿಕಲ್, ಪೇಂಟರ್, ಕಾರ್ಪೆಂಟರ್, ಮೆಕ್ಯಾನಿಕ್ ಮಷಿನ್ ಟೂಲ್, ಟರ್ನರ್, ವೈಯರ್‌ಮನ್, ರೆಫ್ರಿಜೆರೇಷನ್‌ ಟ್ರೇಡ್‌ಗಳಲ್ಲಿ ನೇಮಕ ಮಾಡಲಾಗುತ್ತದೆ.

ಪೂರ್ವ ರೈಲ್ವೆಯ ಅಧಿಕೃತ ವೆಬ್‌ಸೈಟ್‌ ವಿಳಾಸ: https://er.indianrailways.gov.in/

ಆಯ್ಕೆ ವಿಧಾನ ಹೇಗಿರುತ್ತದೆ?
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅವರು ಐಟಿಐ ಟ್ರೇಡ್‌ನಲ್ಲಿ ಗಳಿಸಿದ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಿ, ದಾಖಲೆಗಳ ಪರಿಶೀಲನೆ / ಮೆಡಿಕಲ್ ಟೆಸ್ಟ್‌ ನಡೆಸಿ ನೇಮಕ ಮಾಡಿಕೊಳ್ಳಲಾಗುತ್ತದೆ.