ಅಂಕೋಲಾ: ಇಲ್ಲಿನ ಕನಸೆಗದ್ದೆಯ ನಿವಾಸಿ 30ಕ್ಕೂ ಹೆಚ್ಚು ಸದಸ್ಯರಿರುವ ಅತೀ ದೊಡ್ಡ ಅವಿಭಕ್ತ ಕುಟುಂಬದ ಮಹಾತಾಯಿ ಶತಾಯುಷಿ ರಮಾ ಜಟ್ಟಿ ನಾಯ್ಕ ಇಹಲೋಕ ತ್ಯಜಿಸಿದ್ದಾರೆ. ಅಂಕೋಲಾ ಪೇಟೆಯಲ್ಲಿ ಸೋಡಾ ಜಟ್ಟಿ ಎಂದೇ ಪ್ರಚಲಿತವಿದ್ದ ದಿ.ಜಟ್ಟಿ ನಾಯ್ಕ ಇವರ 8 ಮಕ್ಕಳನ್ನು ಧರ್ಮಪತ್ನಿಯಾಗಿ ಸಾಕಿ ಸಲುಹಿ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು ಮರಿಮಕ್ಕಳನ್ನು ಕಂಡ ಮಹಾತಾಯಿ. ಇದೊಂದು ಮಾದರಿ ಕುಟುಂಬ, ಕುಟುಂಬದ ಎಲ್ಲ ಸದಸ್ಯರನ್ನೂ ಪ್ರೀತಿ ವಾತ್ಸಲ್ಯದಿಂದ ಕಂಡ ಇವರು ಅವಿಭಕ್ತ ಕುಟುಂಬದ ಯಜಮಾನಿ.

RELATED ARTICLES  ದೇವರು ಕರುಣಾಮಯನೆ, ಕ್ರೂರನಲ್ಲವೆ?

ಯಾವುದೇ ಹಬ್ಬಹರಿದಿನಗಳನ್ನು ಎಲ್ಲರೂ ಒಟ್ಟಾಗಿ ಸಂತೋಷದಿಂದ ಆಚರಿಸುವ ಇವರ ಮನೆಯಲ್ಲಿ ಕಳೆದ ವರ್ಷವಷ್ಟೇ ಗಣೇಶ ಚತುರ್ಥಿ ಹಬ್ಬ100 ವರ್ಷ ಪೂರೈಸಿದೆ. ಶತಮಾನೋತ್ಸವದ ನಿಮಿತ್ತ ಹಲವು ಮಹನೀಯರನ್ನು ಸನ್ಮಾನಿಸಿ ಎಲ್ಲರೊಂದಿಗೆ ಆತ್ಮೀಯತೆಯಿಂದಿದ್ದರು. ಅಂದು ರಮಾ ಜಟ್ಟಿ ನಾಯ್ಕ ಇವರನ್ನೂ ಗೌರವಿಸಿದ್ದರು.

ಇದನ್ನೂ ಓದಿ – ಅಶ್ಲೀಲ ವಿಡಿಯೋಗಳಿಗೆ ಬಿತ್ತು ಬ್ರೇಕ್..! ಪೋರ್ನ ಸೈಟ್ ಗಳು ಬಂದ್..!

ಕುಟುಂಬದ 30ಕ್ಕೂ ಹೆಚ್ಚು ಹಾಗೂ ನೂರಾರು ಸಂಬಂಧಿಕರೊಂದಿಗೆ ಗಣೇಶ ಚತುರ್ಥಿಯನ್ನು 9 ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ಆಚರಿಸಿದ್ದರು. ಮಕ್ಕಳೆಲ್ಲರಿಗೂ ಉತ್ತಮ ಶಿಕ್ಷಣ ನೀಡಿ ಅವರೆಲ್ಲರ ಸುಂದರ ಬದುಕನ್ನು ಕಂಡ ಇವರ ನಿಧನದಿಂದ ಪುತ್ರರಾದ ಮಂಜುನಾಥ, ಗಣಪತಿ, ವಿಜಯ, ಅಶೋಕ, ಶಾಂತಾರಾಮ, ರವೀಂದ್ರ, ವಿನಾಯಕ ಹಾಗೂ ಪುತ್ರಿ ವಿಮಲಾ ಇವರ ಕುಟುಂಬದಲ್ಲೀಗ ದುಖಃ ಮಡುಗಟ್ಟಿದ್ದು
ಅಪಾರ ಬಂಧುಬಳಗದವರು, ಕನಸೆಗದ್ದೆಯ ಗ್ರಾಮಸ್ಥರು ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದ್ದಾರೆ.

RELATED ARTICLES  ಲಕ್ಷ ಲಕ್ಷ ರೂಪಾಯಿಯ ಗೋವಾ ಮದ್ಯ ಹಾಗೂ ಪೆನ್ನಿ ವಶ

ಇದನ್ನೂ ಓದಿ – ಮಕ್ಕಳ ಕಳ್ಳರಿದ್ದಾರೆ ಎಚ್ಚರಿಕೆ..ಎಚ್ಚರಿಕೆ..ಎಚ್ಚರಿಕೆ : ಪೋಲೀಸರು ಏನಂತಾರೆ.