ಹೊನ್ನಾವರ : ಹಳದಿಪುರದ ಪಂಚಾಯತ್ ವ್ಯಾಪ್ತಿಯಾಗಿ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಐ ಆರ್ ಬಿ ವಿದ್ಯುತ್ ದೀಪ ಅಳವಡಿಸಬೇಕೆಂದು ಕಳೆದ ಫೆಬ್ರವರಿ ತಿಂಗಳಲ್ಲಿ ಐ ಆರ್ ಬಿ ಕಂಪನಿಯ ವಿರುದ್ಧ ಹಳದಿಪುರದ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಜಿತ್ ನಾಯ್ಕ ಹಾಗೂ ಉಪಾಧ್ಯಕ್ಷರು ಹಾಗೂ ಹಳದಿಪುರ ಗ್ರಾಮ ಪಂಚಾಯತಿ ಕೆಲ ಸದಸ್ಯರು, ಗ್ರಾಮಸ್ಥರು ಪತ್ರಿಕಾ ಮಿತ್ರರ ಸಹಕಾರದೊಂದಿಗೆ ಭಾರಿ ಪ್ರತಿಭಟನೆಯನ್ನು ಮಾಡಿದ್ದು ಈ ಸಂದರ್ಭದಲ್ಲಿ ಹೊನ್ನಾವರ ತಹಶೀಲ್ದಾರರು ಹಾಗೂ ಐ ಅರ್ ಬಿ ಕಂಪನಿಯ ಮುಖ್ಯಸ್ಥರು ಬಂದು ಪ್ರತಿಭಟನೆಯನ್ನು ಶಾಂತಗೊಳಿಸಿ ತಕ್ಷಣದಿಂದ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.

RELATED ARTICLES  ಅಖಿಲ ಭಾರತ ಸಾಹಿತ್ಯ ಪರಿಷತ್ ಇವರ ವತಿಯಿಂದ ನಡೆದ 'ಮಾಸದ ಬೆಳಕು' ಕಾರ್ಯಕ್ರಮ

ಈ ಭರವಸೆಯು ಇಂದು ಈಡೇರಿದೆ. ಇದರಿಂದಾಗಿ ಹಳದಿಪುರ ಗ್ರಾಮಸ್ಥರ ಪ್ರತಿಭಟನೆಗೆ ಫಲ ಸಿಕ್ಕಂತಾಗಿದೆ. ಹಳದಿಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಅಜಿತ್ ನಾಯ್ಕರು ಸಾಂಕೇತಿಕವಾಗಿ ರಾಷ್ಟ್ರೀಯ ಹೆದ್ದಾರಿಯ ದಾರಿದೀಪವನ್ನು ಉದ್ಘಾಟಿಸಿದರು.

RELATED ARTICLES  ಸ್ಪರ್ಧೆಗೆ ಹೆಸರು ನೊಂದಾಯಿಸಲು ಇಂದು ಕೊನೆಯ ದಿನ

ಪ್ರತಿಭಟನೆಯಲ್ಲಿ ಪಾಲ್ಗೊಂಡ ಗ್ರಾಮಸ್ಥರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಪಂಚಾಯತ್ ಅಧ್ಯಕ್ಷರು ಧನ್ಯವಾದವನ್ನು ಸಲ್ಲಿಸಿದರು.