ಕುಮಟಾ : ಪಟ್ಟಣದ ಹಳೆ ಮೀನು ಮಾರುಕಟ್ಟೆಯ 35 ಅಡಿ ಆಳದ ಬಾವಿಯಲ್ಲಿ ಮಹಿಳೆಯೊಬ್ಬಳು ನೀರುತರಲು ಹೋದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು, ಅವಘಡ ಸಂಭವಿಸಿದ ಘಟನೆ ಇಂದು ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಯ ಚುರುಕಿನ ಕಾರ್ಯಾಚರಣೆಯಿಂದಾಗಿ ಮಹಿಳೆಯನ್ನು ರಕ್ಷಿಸಲಾಗಿದೆ.

ಆಕಸ್ಮಿಕವಾಗಿ ಬಾವಿಗೆ ಬಿದ್ದ ಮಹಿಳೆ ಪಟ್ಟಣದ ಹಳೇ ಮೀನು ಮಾರುಕಟ್ಟೆಯ ಶೃತಿ ಶಂಕರನ್ ಎಂಬುವವಳು ಎಂದು ತಿಳಿದುಬಂದಿದೆ. ಸಕಾಲಕ್ಕೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡಿಸಿ, ಮಹಿಳೆಯ ಪ್ರಾಣ ರಕ್ಷಿಸಿದ್ದಾರೆ.

RELATED ARTICLES  ಇದೊಂದು ಖುಷಿ ಸುದ್ದಿ…. ಚಂದ್ರನ ಮೇಲೂ ನೆಟವರ್ಕ್ ಟವರ್ ನಿರ್ಮಾಣ.!

ಈ ಸುದ್ದಿ ಓದಿ – 12 ವರ್ಷದ ಮಗಳಮೇಲೆಯೇ ಹಲ್ಲೆ ಮಾಡಿದ ತಂದೆ : ದಾಖಲಾಯ್ತು ಪ್ರಕರಣ.

ಮಹಿಳೆಯನ್ನು ಬಾವಿಯಿಂದ ಮೇಲಕ್ಕೆ ಎತ್ತಿದ ಬಳಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪ್ರಭಾರಿ ಅಗ್ನಿ ಶಾಮಕ ಠಾಣಾಧಿಕಾರಿ ತಮ್ಮಯ್ಯಗೊಂಡ, ಸಿಬ್ಬಂದಿಯಾದ ರಾಮ ನಾಯ್ಕ, ಸಂದೀಪ ನಾಯಕ, ಜಯಂತ ನಾಯ್ಕ, ನಾಗರಾಜ ಪಟಗಾರ, ಮಹಾಬಲೇಶ್ವರ ಹರಿಕಂತ್ರ, ಮಂಜುನಾಥ ಹೆಗಡೆ, ದಿನೇಶ ಮುಂತಾದವರು ಇದ್ದರು.

RELATED ARTICLES  ರಾಜ್ಯ ರಾಜಕಾರಣದಲ್ಲಿ ಅನಂತಣ್ಣನಿಗೆ ಸಿಗಲಿ ಸೂಕ್ತ ಸ್ಥಾನಮಾನ : ಇದು ಅಭಿಮಾನಿಗಳ ಮನದಾಳ.