ಜೋಯಿಡಾ : ಖಚಿತ ಮಾಹಿತಿ ಮೇಲೆ ಅನಮೋಡ ಅಭಕಾರಿ ತನಿಖಾ ಠಾಣೆಯಲ್ಲಿ ಬೆಳಗಿನ ಜಾವ 5:30 ರ ವೇಳೆಗೆ ಅಧಿಕಾರಿಗಳು ಕಾರ್ಯಚರಣೆ ನಡೆಸಿ ಗೋವಾಕ್ಕೆ ದನದ ಮಾಂಸ ಸಾಗಾಟ ಮಾಡುತ್ತಿದ್ದ ಮೂರು ವಾಹನಗಳ ಜೊತೆಗೆ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ರವಿವಾರ ಮುಂಜಾನೆ ರಾಮನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

RELATED ARTICLES  ಲಯನ್ಸ್ ಶಾಲೆಯ 7 ವಿದ್ಯಾರ್ಥಿಗಳಿಗೆ ಸ್ಕೌಟ್ಸ್ & ಗೈಡ್ಸ್ ರಾಜ್ಯ ಪುರಸ್ಕಾರ

ಈ ಸುದ್ದಿಯನ್ನೂ ಓದಿ – Job News – ಪದವಿ ಆದವರಿಗೆ 25 ಸಾವಿರ ಸಂಬಳ

ದಾಳಿ ವೇಳೆ 2 ಮಹಿಂದ್ರಾ ಬೊಲೆರೋ ಪಿಕ್ ಅಪ್ ಹಾಗೂ ಟಾಟಾ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಅಂದಾಜು 3,10,800 ರೂ. ಮೌಲ್ಯದ 2,220 ಕೆಜಿ ದನದ ಮಾಂಸವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಮನಗರ ಪಿಎಸ್ ಐ ಯಲ್ಲಾಲಿಂಗ ಕುನ್ನೂರ ಮತ್ತು ಸಿಬ್ಬಂದಿಗಳು ಈ ಕಾರ್ಯಚರಣೆ ನಡೆಸಿದ್ದು, ಒಟ್ಟೂ 5 ಜನರ ಮೇಲೆ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.

RELATED ARTICLES  ಆನಂದ್ ಅಸ್ನೋಟಿರ್ ರಾಜಕೀಯಕ್ಕೆ ರೀ ಎಂಟ್ರಿ?ನ.12ಕ್ಕೆ ಅವರ ಮನೆ ಮುಂದೆ ಧರಣಿ!