ಹೊನ್ನಾವರ : ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಿಷನ್ ಕೆಟ್ಟಿರುವದರ ಬಗ್ಗೆ ಶಾಸಕ ದಿನಕರ ಶೆಟ್ಟಿ ಮಾಹಿತಿ ಪಡೆದು ಆಸ್ಪತ್ರೆಗೆ ಭೇಟಿ ಪರಿಶೀಲೀಸಿದರು ಮತ್ತು ಡಯಾಲಿಸಿಸ್ ಸಿಬ್ಬಂದಿಗಳಿಂದ ಮಾಹಿತಿ ಪಡೆದರು. ಈ ಹಿಂದೆ ಆರು ಮಿಷನ್ ನಲ್ಲಿ ಎರಡು ಮಿಷನ್ ರಿಪೇರಿ ಮಾಡಲು ಸಾಧ್ಯವಿಲ್ಲ. ಕೆಟ್ಟು ಹೋದ ಒಂದು ಮಿಷನ್ ಸರಿಯಾಗಿದೆ. ಎರಡು ಮಿಷನ್ ದುರಸ್ತಿ ಮಾಡಲು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಎರಡು ಮಿಷನ್ ಡಯಾಲಿಸಿಸ್ ಮುಂದುವರೆದಿದೆ ಎಂದು ಸಿಬ್ಬಂದಿ ಯಶೋಧಾ ಮಾಹಿತಿ ನೀಡಿದರು.

ಕಳೆದ ಒಂದು ವರ್ಷದ ಹಿಂದೆ ಬಿಜೆಪಿ ಪಕ್ಷದ ವತಿಯಿಂದ ನೀಡಿದ ಮಿಷನ್ ನಿನ್ನೆ ಕೆಟ್ಟಿತ್ತು. ಈ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಸಂಭದಿಸಿದ ಅಧಿಕಾರಿಗಳ ಮೂಲಕ ಇಂದೇ ದುರಸ್ತಿ ಆಗಬೇಕು ಎಂದು ಆದೇಶ ಮಾಡಲಾಗಿತ್ತು. ಅದರಂತೆ ಇಂದು ಕಾರ್ಯರಂಭವಾಗಿದೆ. ಈ ತಿಂಗಳಾಂತ್ಯದಲ್ಲಿ ಇನ್ನೊಂದು ಹೊಸ ಮಿಷನ್ ನೀಡಲಾಗುತ್ತದೆ. ಇದರ ಜೊತೆಗೆ ಶಾಸಕ ಸುನೀಲ ನಾಯ್ಕ ಇವರ ಬಳಿ ಒಂದು ಮಿಷನ್ ನೀಡುವಂತೆ ಕೇಳಿದಾಗ ಅವರು ಕೂಡಾ ಒಪ್ಪಿದ್ದಾರೆ. ಈ ಹಿಂದೆ ಬಿ.ಆರ್.ಶೆಟ್ಟಿ ಕಂಪನಿಯ ನಿರ್ವಹಣೆ ಸರಿಯಾಗಿತ್ತು. ಅವರ ಆರ್ಥಿಕ ಸ್ಥಿತಿ ಹದಗೆಟ್ಟ ಬಳಿಕ ಕೊಲ್ಕತ್ತಾ ಸಂಜೀವಿನಿ ಕಂಪನಿಯ ನಿರ್ವಹಣೆ ಬಗ್ಗೆ ಅಧಿವೇಶನದಲ್ಲಿ ಸಚೀವರ ಬಳಿ ಮತ್ತು‌ ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೇನೆ. ಮುಂದಿನ ತಿಂಗಳಾಂತ್ಯದಲ್ಲಿ ಹೊಸ ಮಿಷನ್ ಮತ್ತು ಎರಡು ದುರಸ್ತಿಯಾಗುವ ಮಿಷನ್ ಸಾರ್ವಜನಿಜರ ಸೇವೆಗೆ ಲಭ್ಯವಾಗಲಿದೆ. ಹೊನ್ನಾವರ ತಾಲೂಕ ಆಸ್ಪತ್ರೆಯ ಬಗ್ಗೆ ಈ ಹಿಂದೆಯೂ ಅತ್ಯಂತ ಕಾಳಜಿ ಇಂದ ವ್ಯವಸ್ಥೆ ಕಲ್ಪಿಸಲಾಗಿತ್ತು, ಮುಂದೆಯೂ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಯಾರೂ ಕೂಡ ಗಾಬರಿ ಪಡುವ ಅವಶ್ಯಕತೆ ಇಲ್ಲ ನನ್ನ ಕ್ಷೇತ್ರದ ಜನರ ಬಗ್ಗೆ ನನಗೆ ಮೊದಲಿನಿಂದಲೂ ಅಪಾರ ಕಾಳಜಿ ಇದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

RELATED ARTICLES  ಸುಲ್ತಾನಕೇರಿ ಜನತಾ ಕಾಲನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ ಉದ್ಘಾಟನೆ

ಇದನ್ನೂ ಓದಿ – ಬಾವಿಗೆ ನೀರು ತರಲು ಹೋದ ಸಂದರ್ಭದಲ್ಲಿ ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ : ಚುರುಕಿನ ಕಾರ್ಯಾಚರಣೆ.

ಈ ವೇಳೆ ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಮುಖಂಡರಾದ ಎಂ.ಜಿ.ನಾಯ್ಕ, ಆನಂದು ನಾಯ್ಕ, ಸುರೇಶ ಹರಿಕಂತ್ರ, ಶಿವಾನಂದ ಮರಾಠಿ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಕುಮಟಾ ಗೋ ಪರಿವಾರದ ಸಭೆ : ಪದಾಧಿಕಾರಿಗಳ ಸೇರ್ಪಡೆ.