ಭಾರತೀಯ ಪೋಸ್ಟ್ ಆಫೀಸ್ ಪೋಸ್ಟ್ ಮ್ಯಾನ್, ಪೋಸ್ಟ್ ಗಾರ್ಡ್ ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ವೆಬ್‌ಸೈಟ್ ನಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ದೇಶದ ಹಲವು ಭಾಗಗಳಲ್ಲಿ ಉದ್ಯೋಗಾವಕಾಶವಿದೆ. ಭಾರತೀಯ ಪೋಸ್ಟ್ ಒಂದು ವಿಶಾಲ ವಲಯ ಹೊಂದಿರುವುದರಿಂದ ಉದ್ಯೋಗ ಅವಕಾಶಗಳು ಹೆಚ್ಚಿರುತ್ತವೆ.
ಇದನ್ನೂ ಓದಿ – ಪದವಿ ಮುಗಿದಿದೆಯೇ? ಇಲ್ಲಿದೆ ಜಾಬ್ ನ್ಯೂಸ್..!
ದೇಶದಾದ್ಯಂತ ಹಲವೆಡೆ ಈ ಹುದ್ದೆಗಳು ಖಾಲಿ ಇದ್ದು ಉದ್ಯೋಗಕ್ಕೆ ಹೆಚ್ಚಿನ ಅವಕಾಶವಿದೆ. ಭಾರತೀಯ ಪೋಸ್ಟ ಇಲಾಖೆ ಬಹಳ ವಿಸ್ತಾರವಾದ ವಲಯವನ್ನು ಹೊಂದಿದ್ದು ಉದ್ಯೋಗಾವಕಾಶಗಳ ಸಂಖ್ಯೆಯೂ ಸಹ ಹೆಚ್ಚಿದೆ. ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ಇದರ ಜೊತೆಗೆ ಸ್ಟೆನೋಗ್ರಾಫರ್ ಸಂಬಂಧಿತ ಹುದ್ದೆಗಳನ್ನು ಸಹ ವೃತ್ತವಾರು ಅನುಮೋದಿಸಲಾಗಿದೆ.
ಆಂದ್ರ ಪ್ರದೇಶದಲ್ಲಿ 108 ಮೇಲ್ ಗಾರ್ಡ್, 1166 MTS, ಮತ್ತು 2289 ಪೋಸ್ಟ್‌ಮೆನ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ತೆಲಂಗಾಣ ವೃತ್ತದಲ್ಲಿ 82 ಮೇಲ್ ಗಾರ್ಡ್‌ಗಳು, 878 MTS ಮತ್ತು 1553 ಪೋಸ್ಟ್‌ಮ್ಯಾನ್ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ವಯಸ್ಸಿನ ಮಿತಿ :
ಪೊಸ್ಟ್ ಆಫೀಸ್ ಉದ್ಯೋಗಕ್ಕೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು 18 ರಿಂದ 32 ವರ್ಷದೊಳಗಿನವರಾಗಿರಬೇಕು.
ಖಾಲಿ ಇರುವ ಹುದ್ದೆಗಳ ವಿವಿರ :
ಪೋಸ್ಟ್‌ಮ್ಯಾನ್ : 59,099 ಹುದ್ದೆಗಳು
ಮಲ್ಟಿ-ಟಾಸ್ಕಿಂಗ್ : 37,539 ಹುದ್ದೆಗಳು
ಮೇಲ್‌ಗಾರ್ಡ್ : 1445 ಹುದ್ದೆಗಳು.
ಅರ್ಹತೆ :
10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್ ಬೇಸಿಕ್ ತಿಳಿದರಿರಬೇಕು.
ಕೆಲವು ಹುದ್ದೆಗಳಿಗೆ 12 ನೇತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.
ಅರ್ಜಿ ಪ್ರಕ್ರಿಯೆ ಹೇಗೆ?
ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.
ರಿಜಿಸ್ಟರ್ ಮಾಡಿಕೊಳ್ಳಿ
ನಿಗದಿತ ಶುಲ್ಕ ಪಾವತಿಸಿ
ದೂರವಾಣಿ ಸಂಖ್ಯೆ ನಮೂದಿಸಿ
ಇನ್ನಿಷ್ಟು ಮಾಹಿತಿಗಳನ್ನು ತಿಳಿಯಬೇಕೇ? ಈ ಲಿಂಕ್ ಒತ್ತಿ. https://satwadhara.news/category/informations/