ಶಿರಸಿ : ಅರಣ್ಯ ಸಿಬ್ಬಂದಿಗಳ ದೌರ್ಜನ್ಯದ ಕುರಿತು ಜಿಲ್ಲಾದ್ಯಂತ ಆಗಮಿಸಿದ ಅರಣ್ಯವಾಸಿಗಳಿಂದ ತೀವ್ರ ಆಕ್ರೋಶ, ಸಭಾಧ್ಯಕ್ಷರ ಮನೆ ಮುಂದೆ ಬೃಹತ್ ಧರಣಿ, ಸಭಾಧ್ಯಕ್ಷರ ಉತ್ತರಕ್ಕೆ ತೀವ್ರ ಅಸಮಧಾನ ಹಾಗೂ ಸುಪ್ರೀಂ ಕೋರ್ಟನಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸಲು ಸರಕಾರಕ್ಕೆ 15 ದಿನ ಗಡವು ನೀಡುವುದೊಂದಿಗೆ ಬೃಹತ್ ಪ್ರತಿಭಟನೆ ಯಶಸ್ವಿಯಾಗಿ ಜರುಗಿದವು.

ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅವರ ನೇತ್ರತ್ವದಲ್ಲಿ ಶಿರಸಿಯ ಬಿಡಿಬೈಲಿನಲ್ಲಿರುವ ಗಾಂಧಿ ಪ್ರತಿಮೆಗೆ ಸಾಮಾಜಿಕ ಹೋರಾಟಗಾರ ಕಾಗೋಡ ತಿಮ್ಮಪ್ಪ ಅವರು ಗಾಂಧಿಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿದ ನಂತರ ಪ್ರಮುಖ ಬೀದಿಗಳಲ್ಲಿಬಮೆರವಣಿಗೆ ಸಾಗಿ ಸಭಾಧ್ಯಕ್ಷರಬಕಚೇರಿ ಮುಂದೆ ಧರಣಿಯಾಗಿ ಪರಿವರ್ತನೆ ಗೊಂಡಿತು.

RELATED ARTICLES  ಹತ್ಯೆಗೊಳಗಾದ ಪ್ರವೀಣ್ ಮನೆಗೆ ಸಿ.ಎಂ ಭೇಟಿ

ಅರಣ್ಯವಾಸಿಗಳ ಹಕ್ಕು ನೀಡುವ ಹಾಗೂ ಸರ್ವೋಚ್ಚ ನ್ಯಾಯಾಲಯದಲ್ಲಿ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವ ದಿಶೆಯಲ್ಲಿ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಂದ ಸರಕಾರದ ಪರವಾಗಿ ನೀಡಿದ ಉತ್ತರವು ಸ್ಪಷ್ಟತೆಗೆ ಅಗ್ರಹಿಸಿ ಧರಣಿ ಸಂದರ್ಭದಲ್ಲಿ ಅರಣ್ಯವಾಸಿಗಳಿಂದ ತೀವ್ರ ಆಕೇಪ ವ್ಯಕ್ತವಾಯಿತು.

RELATED ARTICLES  ಗೋಕರ್ಣದ ಕುಡ್ಲೆ ಸಮೀಪ ಕಾಣಿಸಿಕೊಂಡ ಚಿರತೆ : ಭಯದಲ್ಲಿ ಜನತೆ.

ಸಭಾಧ್ಯಕ್ಷರು ಧರಣಿ ನಿರತ ಅರಣ್ಯವಾಸಿಗಳಿಗೆ ಸಮಜಾಯಿಸಿ ನೀಡುವ ಸಂದರ್ಭದಲ್ಲಿ ಪೋಲೀಸ್ ಅಧಿಕಾರಿ ಅರಣ್ಯವಾಸಿಗಳ ಮಾತನ್ನ ನಿಯಂತ್ರಿಸುವ ಪ್ರಯತ್ನದಲ್ಲಿದ್ದಾಗ ಹೋರಾಟಗಾರರಿಗೂ ಮತ್ತು ಪೋಲೀಸ್ ಅಧಿಕಾರಿಯೊಂದಿಗೆ ಮಾತಿನ ಚಕಮಕಿಯ ಘಟನೆ ಜರುಗಿದವು.