ಮೊಳಕೆ ಕಟ್ಟಿದ ಕಾಳಿಂದ ಈ 11 ರೀತೀಲಿ ಲಾಭ ಇದೆ ಅಂತ ಗೊತ್ತಾದ್ರೆ ಇನ್ಮೇಲೆ ತಿಂತಾನೇ ಇರ್ತೀರ

ಬೀಜ ಮೊಳಕೆ ಒಡೆದ್ರೇನೇ ಒಂದು ಗಿಡ ಚಿಗುರೋಕೆ ಸಾಧ್ಯ ಅನ್ನೋ ಮಾತು ಎಷ್ಟು ನಿಜಾನೋ ನಮ್ಮ ಆರೋಗ್ಯ ಚೆನ್ನಾಗಿರೋಕೆ ಮೊಳಕೆ ಕಾಳುಗಳನ್ನ ತಿನ್ಬೇಕು ಅನ್ನೋದೂ ಅಷ್ಟೇ ಸತ್ಯ. ಸಾಮಾನ್ಯವಾಗಿ ಮೊಳಕೆ ಕಾಳುಗಳು ಅಂದರೆ ನಮಗೆ ನೆನಪಾಗೋದು ಕಡಲೆ ಕಾಳು, ಹೆಸರು ಕಾಳು, ಹುರುಳಿ ಕಾಳು ಮತ್ತು. ಇದರಲ್ಲಿ ಯಾವುದು ತಿಂದರೂ ಅಥವಾ ಎಲ್ಲಾ ಸೇರಿಸಿ ತಿಂದರೂ ನಿಮಗೆ ನಾವು ಹೇಳೋ ಎಲ್ಲಾ ಲಾಭಗಳೂ ಸಿಗುತ್ವೆ. ಕಾಳುಗಳನ್ನ ಹಾಗೇ ತಿನ್ನೋ ಬದಲು ಮೊಳಕೆ ಒಡೆದ್ಮೇಲೆ ತಿಂದ್ರೆ ಅದರಲ್ಲಿ ಪೌಷ್ಟಿಕಾಂಶಗಳು ಜಾಸ್ತಿ ಇರುತ್ತೆ.

ಕೆಲವು ಸಂಸ್ಕೃತಿಗಳಲ್ಲಿ ಮೊಳಕೆ ಕಾಳುಗಳಿಗೆ ಸಾಕಷ್ಟು ಮಹತ್ವ ಕೊಟ್ಟಿದ್ದಾರೆ. ಆದ್ರೆ ಇದರಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಅಂತ ಹೆಚ್ಚು ತಿಳಿದಿರೋದು ಭಾರತೀಯರಿಗೆ ಮಾತ್ರ ಅನ್ಸುತ್ತೆ. ಅದಕ್ಕೆ ಎಲ್ಲೆಲ್ಲಿ ಮೊಳಕೆ ಕಾಳುಗಳನ್ನ ಸೇರಿಸೋಕೆ ಸಾಧ್ಯ ಆಗುತ್ತೋ ಅಲ್ಲೆಲ್ಲಾ ಸೇರಿಸಿರೋದು ನಾವು ಮಾತ್ರ. ಈಗೇನು ಮಾರ್ಕೇಟ್ ನಲ್ಲಿ ನಿಮಗೆ ಯಾವ ಮೊಳಕೆ ಕಾಳು ಬೇಕೋ ಸಿಗುತ್ತೆ, ಅದಕ್ಕೋಸ್ಕರ ಮನೇಲಿ ಕಷ್ಟ ಪಡೋ ಅಗತ್ಯಾನೂ ಇಲ್ಲ. ಇನ್ನೊಂದ್ ಮಾತು, ಮೊಳಕೆ ಕಾಳನ್ನ ಬೇಯಿಸಿದ್ರೆ ಅದರ ಪೌಷ್ಟಿಕತೆ ದೇಹಕ್ಕೆ ಸಿಗಲ್ಲ. ಹಾಗಾಗಿ ಯಾವಾಗ್ಲೇ ಮೊಳಕೆ ಕಾಳು ತಿಂದ್ರೂ ನೀವು ಹಸಿಯಾಗೇ ತಿಂದ್ರೆ ಒಳ್ಳೇದು.

ಮೊಳಕೆ ಕಾಳಲ್ಲಿ ಪ್ರೋಟೀನ್, ಫೈಬರ್, ವಿಟಮಿನ್ ಕೆ, ಫೋಲೇಟ್, ನೈಯಾಸಿನ್, ಥೈಯಾಮಿನ್, ವಿಟಮಿನ್ ಸಿ, ವಿಟಮಿನ್ ಏ, ರೈಬೋಫ್ಲೇವಿನ್, ಮ್ಯಾಂಗನೀಸ್, ಕಾಪರ್, ಜಿಂಕ್, ಮಗ್ನೀಷಿಯಂ, ಐರನ್, ಕ್ಯಾಲ್ಷಿಯಂ ಅಷ್ಟೇ ಅಲ್ಲದೇ ದೇಹಕ್ಕೆ ಬೇಕಾದ ಬೇರೆ ಎನ್ಜೈಮ್ ಗಳೂ ಇವೆ. ಅಬ್ಬಾ! ಪಟ್ಟಿ ಎಷ್ಟು ದೊಡ್ಡದಿದೆ ನೋಡಿದ್ರಾ?

ಇಷ್ಟರ ಮೇಲೆ ಇನ್ಯಾಕ್ ತಡ, ಮೊಳಕೆ ಕಾಳಿಂದ ಏನೇನ್ ಲಾಭ ಇದೆ ಅಂತ ತಿಳ್ಕೊಂಡೇ ಬಿಡೋಣ ಬನ್ನಿ.

1. ಮೊಳಕೆ ಕಾಳು ತಿನ್ನೋದ್ರಿಂದ ಜೀರ್ಣಶಕ್ತಿ ಹೆಚ್ಚುತ್ತೆ

ಇದರಲ್ಲಿರೋ ಎನ್ಜೈಮ್ ಗಳು ಜೀರ್ಣಕ್ರಿಯೇನ ಸರಾಗ ಮಾಡಿದ್ರೆ, ಫೈಬರ್ ಅಂಶ ಆಹಾರದ ಸಂಚಾರವನ್ನ ಸಲೀಸು ಮಾಡಿ ಮಲ ಸರಿಯಾದ ಪ್ರಮಾಣದಲ್ಲಿ ಉತ್ಪತ್ತಿ ಆಗೋ ಹಾಗೆ ನೋಡ್ಕೊಂಡು ಮಲಬದ್ಧತೆ ತಡಿಯತ್ತೆ.

RELATED ARTICLES  ಹೆಚ್ಚು ತಿಂದರೂ ತೂಕ ಮಾತ್ರ ಕಡಿಮೆ ಇರಬೇಕೆಂದು ಇಚ್ಛಿಸುವವರಿಗೆ ಇಲ್ಲಿದೆ ನೋಡಿ ಟಿಪ್ಸ..!

2. ದೇಹದಲ್ಲಿ ಜೀವಕಣಗಳ ಉತ್ಪತ್ತಿ ಮಾಡಿ, ಹಳೇ ಕಣಗಳ ರಿಪೇರಿ ಮಾಡತ್ತೆ

ನಿಮಗೆ ಗೊತ್ತಿರೋ ಹಾಗೆ ಮೊಳಕೆ ಕಾಳಲ್ಲಿ ಸಾಕಷ್ಟು ಎನ್ಜೈಮ್ಸ್ ಇರೋದ್ರಿಂದ ದೇಹದಲ್ಲಿ ಎಲ್ಲಾ ಭಾಗಕ್ಕೆ ಬೇಕಾದ ಪೌಷ್ಟಿಕಾಂಶಗಳನ್ನ ಸರಿಯಾಗಿ ಸಿಗೋ ಹಾಗೆ ಮಾಡಿ, ದೇಹದ ಎಲ್ಲಾ ಕ್ರಿಯೆಗಳೂ ಸರಿಯಾಗಿ ಆಗೋ ಹಾಗೆ ನೋಡಿಕೊಳ್ಳುತ್ತೆ. ಜೊತೇಲಿ ಅತೀ ಹೆಚ್ಚು ಪ್ರೋಟೀನ್ ಇರೋ ಕಾರಣ ದೇಹದಲ್ಲಿ ಜೀವಕಣಗಳ ಉತ್ಪತ್ತಿ ಹಾಗು ಹಳೇ ಕಣಗಳ ರಿಪೇರಿ ಕೂಡ ಇದರದ್ದೇ ಕೆಲಸ. ಇನ್ನು ಮಾಂಸಾಹಾರ ತಿನ್ನದೇ ಇರೋರಿಗೆ ಇದಕ್ಕಿಂದ ಒಳ್ಳೇ ಆಹಾರ ಇಲ್ಲ ಅನ್ಬೋದು!

3. ಅನೀಮಿಯಾ ಬರೋದನ್ನ ತಡಿಯತ್ತೆ

ಅನೀಮಿಯಾ ಬಂದಿದೆ ಅಂದ್ರೆ ರಕ್ತ ಕಣ ಕಡಿಮೆ ಆಗಿದೆ ಅಂತ, ಇದು ಸಾಮಾನ್ಯವಾಗಿ ಐರನ್ ಅಂಶದ ಕೊರತೆಯಿಂದ ಆಗುತ್ತೆ. ಮೊಳಕೆ ಕಾಳುಗಳಲ್ಲಿ ಐರನ್ ಜೊತೆ ಕಾಪರ್ ಕೂಡ ಇರೋದ್ರಿಂದ ಅನೀಮಿಯಾ ಇಂದ ಸಾಮಾನ್ಯವಾಗಿ ಬರೋ ಸುಸ್ತು, ಏಕಾಗ್ರತೆ ಕೊರತೆ, ತಲೆ ಸುತ್ತು, ಹೊಟ್ಟೆ ಸಮಸ್ಯೆಗಳಿಂದ ನಿಮ್ಮನ್ನ ದೂರ ಇರಿಸುತ್ತೆ.

4. ನಿಮ್ಮ ಹೃದಯ ಕಾಪಾಡತ್ತೆ

ಮೊಳಕೆ ಕಾಳುಗಳಲ್ಲಿರೋ ಒಮೇಗಾ ಫ್ಯಾಟೀ ಆಸಿಡ್ ದೇಹಕ್ಕೆ ಬೇಕಾಗೋ ಒಳ್ಳೆ ಕೊಬ್ಬಿನ ಅಂಶ ಸೇರೊ ಹಾಗೆ ಮಾಡಿ ನಿಮ್ಮ ರಕ್ತ ನಾಳಗಳ ಆರೋಗ್ಯಾನ ಕಾಪಾಡುತ್ತೆ. ಇದು ಆಂಟಿ ಇನ್ಪ್ಲಮೇಟರಿ ಆಗಿರೋ ಕಾರಣ ರಕ್ತನಾಳಗಳ ಮೇಲಿರೋ ಒತ್ತಡಾನೂ ಕಡಿಮೆ ಮಾಡತ್ತೆ. ಇದರಲ್ಲಿರೋ ಪೊಟ್ಯಾಶಿಯಂ ರಕ್ತದೊತ್ತಡ ಕಡಿಮೆ ಮಾಡಿ ರಕ್ತನಾಳಗಳನ್ನ ಸ್ವಸ್ಥವಾಗಿಡುತ್ತೆ. ರಕ್ತ ಸಂಚಾರ ಹೆಚ್ಚಿಸಿ ದೇಹಕ್ಕೆ ಹೆಚ್ಚು ಆಕ್ಸಿಜನ್ ಸಿಗೋ ಹಾಗೆ ನೋಡಿಕೊಂಡು ಸ್ಟ್ರೋಕ್ ಹಾಗೆ ಹಾರ್ಟ್ ಅಟ್ಯಾಕ್ ಆಗದ ಹಾಗೆ ನೋಡಿಕೊಳ್ಳುತ್ತೆ.

5. ತಾಯಿ ಹೊಟ್ಟೇಲಿರೋ ಮಗೂಗೆ ನರಗಳ ಸಮಸ್ಯೆ ಬರ್ದೇ ಇರೋ ಹಾಗೆ ನೋಡಿಕೊಳ್ಳುತ್ತೆ

ವಿಟಮಿನ್ ಬಿ ಕಾಂಪ್ಲೆಕ್ಸಲ್ಲಿ ಒಂದಾಗಿರೋ ಫಾಲೇಟ್ ಕೊರತೆಯಿಂದ ನ್ಯೂರಲ್ ಟ್ಯೂಬ್ ಡಿಫೆಕ್ಟ್ ಆಗುತ್ತೆ ಮಗೂಗೆ. ಮೊಳಕೆ ಕಾಳಲ್ಲಿರೋ ಫಾಲೇಟ್ ಇದನ್ನ ಆಗದ ಹಾಗೆ ತಡೆಗಟ್ಟುತ್ತೆ.

RELATED ARTICLES  The man who saved thousands of people from HIV

6. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ

ಮೊಳಕೆ ಕಾಳಲ್ಲಿರೋ ವಿಟಮಿನ್ ಸಿ ಒಂದೆ ಸಾಕು ಕಣ್ರೀ ದೇಹಕ್ಕೆ ಇನ್ಫೆಕ್ಷನ್ ಆಗದ ಹಾಗೆ ತಡ್ಯೋಕೆ… ಇದರ ಜೊತೆ ವಿಟಮಿನ್ ಏ ಕೂಡ ಹೇರಳಾವಾಗಿರೋದ್ರಿಂದ ದೇಹಕ್ಕೆ ಹೆಚ್ಚೆಚ್ಚು ಆಂಟಿ ಆಕ್ಸಿಡೆಂಟ್ಸ್ ಸಿಕ್ಕಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತೆ.

7. ಕ್ಯಾನ್ಸರ್ ಬರದ ಹಾಗೆ ನೋಡಿಕೊಳ್ಳುತ್ತೆ

ಮೊಳಕೆ ಕಾಳಲ್ಲಿರೋ ವಿಟಮಿನ್ ಏ, ಸಿ ಜೊತೇಲಿ ಅಮಿನೊ ಆಸಿಡ್ಸ್ ಹಾಗೆ ಪ್ರೋಟೀನ್ ಎಲ್ಲದರ ಜೊತೆ ಎನ್ಜೈಮ್ಸ್ ದೇಹದಲ್ಲಿ ಫ್ರೀ ರಾಡಿಕಲ್ಸ್ ಸೇರದ ಹಾಗೆ ಮಾಡುತ್ತೆ. ದೇಹದಲ್ಲಿ ನಡೆಯೋ ಹಲವಾರು ಕ್ರಿಯೆಗಳ ಪರಿಣಾಮವಾಗಿ ಫ್ರೀ ರಾಡಿಕಲ್ಸ್ ಉತ್ಪತ್ತಿ ಆಗುತ್ತೆ, ಈ ಫ್ರೀ ರಾಡಿಕಲ್ಸ್ ದೇಹದಲ್ಲಿ ಕ್ಯಾನ್ಸರ್ ಸೆಲ್ಸ್ ಸೇರೋ ಹಾಗೆ ಮಾಡುತ್ತೆ. ಅಷ್ಟೇ ಅಲ್ಲದೇ ಸಾಕಷ್ಟು ಖಾಯಿಲೆಗಳಿಗೂ ಇದು ಕಾರಣ ಆಗುತ್ತೆ. ಬೇಗ ವಯಸ್ಸಾಗೋದು, ಕಣ್ಣು ಮಂಜಾಗೋದು, ಹೃದಯಕ್ಕೆ ತೊಂದರೆ ಆಗೋದು ಹೀಗೆ. ಇದೆಲ್ಲ ಆಗಬಾರದು ಅಂದ್ರೆ ಎಲ್ಲಾ ಬಿಟ್ಟು ಮೊಳಕೆ ಕಾಳು ತಿನ್ನಿ.

8. ಕಣ್ಣಿನ ದೃಷ್ಟಿ ಹೆಚ್ಚು ಕಾಲ ಚೆನ್ನಗಿರೋ ಹಾಗೆ ಮಾಡುತ್ತೆ

ವಿಟಮಿನ್ ಏ ಕಣ್ಣಿಗೆ ಸಾಕಷ್ಟು ಉಪಯುಕ್ತ ಅಂತ ಕೇಳಿದ್ದೀರ ಅಲ್ವಾ? ಅದು ನಿಜ. ಯಾಕೆಂದ್ರೆ ಮೊಳಕೆ ಕಾಳು ದಿನಾ ತಿನ್ನೋದ್ರಿಂದ ದೃಷ್ಟಿ ದೋಷ ತಡೆಗಟ್ಟಿ ಗ್ಲುಕೋಮ ಹಾಗೆ ಕ್ಯಾಟರಾಕ್ಟ್ ಆಗದ ಹಾಗೆ ನೋಡಿಕೊಳ್ಳುತ್ತೆ.

9. ತುಟಿ ಮತ್ತು ಬಾಯಿ ಸುತ್ತಾ ಆಗೋ ಹುಣ್ಣು ತಡೆಗಟ್ಟುತ್ತೆ

ಮೊಳಕೆ ಕಾಳಲ್ಲಿರೋ ಲೈಸೀನ್ ಅನ್ನೋ ಎನ್ಜೈಮ್ ಇದನ್ನ ತ್ಡೆಗಟ್ಟೋದ್ರಲ್ಲಿ ಸಾಕಷ್ಟು ಪರಿಣಾಮಕಾರಿ ಅಂತೆ. ತುಟಿ ಸುತ್ತ ಆಗೊ ಹುಣ್ಣು ನೋವನ್ನ ಉಂಟುಮಾಡೊದಲ್ಲದೇ ಇನ್ಫೆಕ್ಟ್ ಆದರೆ ಸಾಕಷ್ಟು ತೊಂದರೆ ಮಾಡುತ್ತೆ. ಹಾಗಾಗಿ ಇದು ಆಗದ ಹಾಗೆ ನೋಡ್ಕೊಳ್ಳೋದು ಉತ್ತಮ.

10. ಆಗಾಗ ಅಲರ್ಜೀ ಆಗ್ತಿದ್ರೆ ಅದನ್ನೂ ಕಡಿಮೆ ಮಾಡತ್ತೆ

ದೇಹಕ್ಕೆ ಉಪಯೋಗ ಆಗೋತ್ತೆ