ಕಳೆದ ಹಲವು ವರ್ಷಗಳಿಂದ ಕುಮಟಾದ ಬಾಡದ ಶ್ರೀ ಕಾಂಚಿಕಾಂಬಾ ದೇವಾಲಯದ ಬಳಿ ಪ್ರತೀ ವರ್ಷವೂ ನವರಾತ್ರಿಯಂದು ಪ್ರತೀದಿನ ಯಕ್ಷಗಾನದ ಪ್ರದರ್ಶನಕ್ಕೆ ಸ್ಥಳೀಯ ಮೇಳವಾದ ಕಾಂಚಿಕಾಂಬಾ ಯಕ್ಷಗಾನ ಮಂಡಳಿಯವರು ಅವಕಾಶ ಮಾಡಿಕೊಟ್ಟಿದ್ದು ಇದರಿಂದ ಬಾಡ ದೇವಿಯ ಗ್ರಾಮವ್ಯಾಪ್ತಿಯ ಚಿಣ್ಣರಿಗೆ ಯಕ್ಷಗಾನ ಕಲೆಯನ್ನು ಪ್ರದರ್ಶಿಸಲು ಸದವಕಾಶವನ್ನು ನೀಡಿದೆ.ಹಾಗೂ ಮಹಿಳಾ ಯಕ್ಷಗಾನ ತಂಡವನ್ನು ಒಳಗೊಂಡಂತೆ ಸ್ಥಳೀಯ ಹವ್ಯಾಸಿಕಲಾವಿದರೂ ಕೂಡ ಯಕ್ಷಗಾನವನ್ನು ಪ್ರದರ್ಶಿಸಿಸಿ ಮೆಚ್ಚುಗೆಗೆ ಪಾತ್ರರಾಗುತ್ತಾ ಬಂದಿರುತ್ತಾರೆ.ಇವರೊಟ್ಟಿಗೆ ಮೇಳದ ವೃತ್ತಿಕಲಾವಿದರೂ ಸೇರಿಕೊಂಡ ಪರಿಣಾಮ ದಿನದಿಂದ ದಿನಕ್ಕೆ ಸಪ್ತಯಕ್ಷಗಾನೋತ್ಸವವು ಜನಪ್ರಿಯತೆಯನ್ನು ಪಡೆದುಕೊಂಡು ಮಳೆಯ ನಡುವೆಯೂ ಪ್ರೇಕ್ಷರ ಅಪಾರ ಸ್ಪಂದನ ಯಕ್ಷಗಾನಕ್ಕೆ ದೊರೆಯುತ್ತಿದೆ.ಪರಂಪರೆಯಂತೆ ಕೊನೆಯ ಯಕ್ಷಗಾನವಾಗಿ ದೇವಿ ಮಹಾತ್ಮೆಯ ಮಹಿಷಾಸುರ ವಧೆ ಪ್ರಸಂಗವು ನಡೆಯುತ್ತಾ ಬಂದಿದ್ದು  ಪ್ರತಿವರ್ಷವೂ ವಿಭಿನ್ನ ಪ್ರಯೋಗಗಳಿಗೆ ಈ ಪ್ರಸಂಗ ಒಳಪಟ್ಟ ಪರಿಣಾಮ ವಿಶೇಷ ಆಕರ್ಷಣೆಯಾಗಿ ಹೊರಹೊಮ್ಮುತ್ತಿದೆ.

RELATED ARTICLES  ಹೊನ್ನಾವರ - ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಶಿಕ್ಷೆ!


ಈ ಬಾರಿ ಮಹಿಷಮರ್ಧಿನಿ ಪ್ರಸಂಗದ ಆರಂಭದ ಮಹಿಷಾಸುರನಾಗಿ ಅಬ್ಬರದ ಪ್ರವೇಶವನ್ನು ಮಾಡಲು ಸಂಘಟಕರು ಹಾಗೂ ಸಮಾಜಸೇವಕರೂ ಆದ ತಾಲೂಕಾ ಪಂಚಾಯತದ ಮಾಜಿ ಸದಸ್ಯ ಜಗನ್ನಾಥ ರಾಮ ನಾಯ್ಕ ಇವರು ಉತ್ಸುಕರಾಗಿರುವುದು ಯಕ್ಷಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದ್ದು ಇವರ ಜೊತೆ ದೇವಿ ಮಹಾತ್ಮೆಯಲ್ಲಿ ಮಹಿಷಾಸುರನ ಪಾತ್ರದ ಮೂಲಕ ಈ ಭಾಗದ ಯಕ್ಷಪ್ರೇಮಿಗಳ ಜನಮಾನಸದಲ್ಲಿ ಪ್ರಸಿದ್ಧಿ ಪಡೆದ ಕೊಂಕಣ ಎಜ್ಯಕೇಶನ್ ಟ್ರಸ್ಟ್ ನ ಉಪನ್ಯಾಸಕರು ಹಾಗೂ ಹವ್ಯಾಸಿ ಕಲಾವಿದ ಚಿದಾನಂದ ಭಂಡಾರಿ ಕಾಗಲ ಇವರು ಹಲವು ವರ್ಷಗಳ ನಂತರ ಮತ್ತೊಮ್ಮೆ ಮಹಿಷಾಸುರನಾಗಿ ರಂಗದಲ್ಲಿ ಕಾಣಿಸಿಕೊಳ್ಳುತ್ತಿರುವುದು ಯಕ್ಷಗಾನ ಪ್ರೇಮಿಗಳಲ್ಲಿ ಸಂತಸವನ್ನುಂಟುಮಾಡಿದೆ.

RELATED ARTICLES  ರಾಮಚಂದ್ರಾಪುರ ಮಠ ವತಿಯಿಂದ ಕಾಳುಮೆಣಸು ಬೆಳೆ ಅವಕಾಶ ಕುರಿತ ವೆಬಿನಾರ್ : ಕಪ್ಪು ಚಿನ್ನದಿಂದ ರೈತರಿಗೆ ಆರ್ಥಿಕ ಭದ್ರತೆ: ಕೃಷಿವಿಜ್ಞಾನಿ ಸಲಹೆ


ಈಗಾಗಲೇ ಪ್ರದರ್ಶನಗೊಂಡ ಎಲ್ಲಾ ಯಕ್ಷಗಾನವು ಒಂದಕ್ಕಿಂತ ಒಂದು ಉತ್ತಮವೆನಿಸಿಕೊಂಡಿದ್ದು ಅತಿಥಿ ಭಾಗವತರು ಹಿಮ್ಮೇಳ ಹಾಗೂ ಕಾಂಚಿಕಾಂಬಾ ಚಿಣ್ಣರ ಮೇಳದ ಪ್ರಧಾನ ಭಾಗವತರಾದ ಗಣೇಶ ಯಾಜಿ ಅವರ ಅಧ್ಬುತ ಭಾಗವತಿಕೆಯ ಜೊತೆ ರಾಮ ಹೆಗಡೆ ಮೂರುರು ಅವರ ವೇಷಭೂಷಣ ಮಾದರಿ ರಸ್ತೆಯ ಗಂಗಾಧರ ನಾಯ್ಕ ಅವರ ದ್ವನಿ ಬೆಳಕಿನ ವ್ಯವಸ್ಥೆಯು ಅಚ್ಚುಕಟ್ಟಾಗಿ ಒಡಮೂಡಿದೆ.


ಒಟ್ಟಾರೆ ಇಂದು ಮಂಗಳವಾರ ರಾತ್ರಿ ಒಂಭತ್ತುಗಂಟೆಗೆ ಪ್ರದರ್ಶಿತವಾಗಲಿರುವ ದೇವಿಮಹಾತ್ಮೆ ಯಕ್ಷಗಾನ ಎಲ್ಲರ ಗಮನವನ್ನು ಸೆಳೆಯುತ್ತಿದೆ.