ಯಲ್ಲಾಪುರ: ಬೆಳಗಾವಿಯಿಂದ ಯಲ್ಲಾಪುರ ಮಾರ್ಗವಾಗಿ ಕೇರಳಕ್ಕೆ ಚಿನ್ನ ಖರೀದಿಗಾಗಿ ಹೊರಟಿದ್ದವರನ್ನು ಅರಬೈಲ್ ಘಟ್ಟದಲ್ಲಿ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಎರಡು ಕೋಟಿಗೂ ಅಧಿಕ ಹಣ ದರೋಡೆ ಮಾಡಿದ ಘಟನೆ ನಡೆದ ಬಗ್ಗೆ ವರದಿಯಾಗಿದೆ.

RELATED ARTICLES  ಸಂಪನ್ನಗೊಂಡ ಶ್ರೀ ಮಹಿಷಾಸುರ ಮರ್ಧಿನಿ ಯಕ್ಷಕಲಾ ಪ್ರತಿಷ್ಠಾನದಿಂದ ನಡೆದ ಸುಧನ್ವಾರ್ಜುನ ಕಾಳಗ

ಕಾರಿನಲ್ಲಿ ತಡರಾತ್ರಿ ಬರುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ, ಚಿನ್ನಾಭರಣ ದೋಚಿದ್ದು, ಕಾರಿನಲ್ಲಿದ್ದವರನ್ನು ಹೆದರಿಸಿ, ಚಿನ್ನಾಭರಣ ಖರೀದಿಗಾಗಿ ತೆಗೆದುಕೊಂಡು ಹೋಗುತ್ತಿದ್ದ 2 ಕೋಟಿ 11 ಲಕ್ಷವನ್ನು ಕಸಿದು ಪರಾರಿಯಾಗಿದ್ದಾರೆ. ಅಲ್ಲದೆ, ಮೊಬೈಲ್ ಅನ್ನೂ ದೋಚಿದ್ದಾರೆ.

RELATED ARTICLES  ನಾಳೆಯಿಂದ ಶಿರಸಿಯಲ್ಲಿ ಮಂಡಿ ನೋವು ಚಿಕಿತ್ಸಾ ಶಿಬಿರ.

ಈ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳಿಗೆ ಬಲೆ ಬೀಸಿದ್ದಾರೆ.