ಮುರುಡೇಶ್ವರ – ದಸರಾ ಹಬ್ಬದ ಸವಿ ನೆನಪಿಗೋಸ್ಕರ ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತೆರ್ನಮಕ್ಕಿ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಕಾಯ್ಕಿಣಿ ಗ್ರಾಮ ಪಂಚಾಯತ, ಸೊಸೈಟಿ ,
ಎಸ್ ಬೀ ಐ ಬ್ಯಾಂಕ್ ಗ, ಗ್ರಾಮ ಲೆಕ್ಕಾದಿಕಾರಿಗಳ ಕಚೇರಿಗೆ ಪೋಸ್ಟ್ ಆಫೀಸ್ಗೆ ಬರುವ ಅಕ್ಕ ಪಕ್ಕದ ವಾರ್ಡ್ ಗೆ ಹೋಗುವ ಎಲ್ಲಾ ಸಾರ್ವಜನಿಕರ ಸುರಕ್ಷತೆ ಹಿತ ದೃಷ್ಠಿ ಇಂದ , ಜನರ ಬಹುದಿನದ ಬೇಡಿಕೆಯಾದ ಕಾಯ್ಕಿಣಿ ಗ್ರಾಮ ಪಂಚಾಯತ್ ಹೈವೆ ರೋಡಿನ ಕ್ರಾಸ್ ಗೆ 6″ಬ್ಯಾರಿ ಕೇಡ್ ಅನ್ನು ಇಂದು ಕೈಕಿಣಿ ಪಂಚಾಯತಉಪಾಧ್ಯಕ್ಷರಾದ
ಶ್ರೀಧರ ನಾಯ್ಕ ಕೈಕಿಣಿ ಅವರು ತಮ್ಮ ವೈಯಕ್ತಿಕ ವೆಚ್ಚ ದಲಿ ರೆಡಿ ಮಾಡಿಸಿ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿದರು. ನಂತರ ಮಾತನಾಡಿ ಇವತ್ತು ಹೈವೆ ಕ್ರಾಸ್ ಗೆ ಬ್ಯಾರಿ ಗೇಟನ್ನು ಹಾಕಿಸಿ ಸಾರ್ವಜನಿಕರಿಗೆ ನಿರ್ಭಯದಿಂದ ರಸ್ತೆಯಲ್ಲಿ ತಿರುಗಾಡಲು ಪ್ರಾಮಾಣಿಕವಾಗಿ ಸಣ್ಣ ಪ್ರಯತ್ನ ಮಾಡಿದ್ದೇನೆ ,ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಜನಸೇವೆ ಮಾಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಕಾಯ್ಕಿಣಿ ಕಾಂಗ್ರೆಸ್ ಯುವ ಮುಖಂಡರು, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರು ರಾಮ ಮೊಗೇರ ,ಯೂಥ್ ಕಾಂಗ್ರೆಸ್
ಅಧ್ಯಕ್ಷ ವಿಶ್ವನಾಥ ಶೆಟ್ಟಿ ,ಕೈಕಿಣಿ ಗ್ರಾಮದ ಕುಪ್ಪ ದಾಸಿ ಹಾಗೂ ಸಚಿನ್ ನಾಯ್ಕ್ ರಾಮಚಂದ್ರ ನಾಯ್ಕ್ ಕುಮಾರ್ ನಾಯ್ಕ್,ಈಶ್ವರ್ ನಾಯ್ಕ್ ಯೂಥ್ ಉಪಾಧ್ಯಕ್ಷ,ಸುಧಾಕರ್ ಹಳ್ಳೆರ್, ಮೋಹನ್ ನಾಯ್ಕ್, ರಾಜೇಶ್ ನಾಯ್ಕ್, ಫ್ರಾನ್ಸಿಸ್ ರಾಜೇಶ್ ದೇವಿಕಾನ್, ಮಂಜುನಾಥ್ ಮೊಗೇರ್ ,ವಾಸ್ಟಿನ್, ಶಿವಾನಂದ್ ಶೆಟ್ಟಿ, ರವಿ ನಾಯ್ಕ್ ಬೆಂಗ್ರೆ, ಉದಯ ಶೆಟ್ಟಿ, ಯೋಗೇಶ್ ನಾಯ್ಕ್ ಬಸ್ತಿ ,ರಾಜೇಶ್ ನಾಯ್ಕ ಸಭಾತಿ, ಊರಿನ ನಾಗರಿಕರು, ಮುಂತಾದವರು ಇದ್ದರು.

RELATED ARTICLES  ಪ್ರಾರ್ಥನಾ ಪ್ರತಿಷ್ಠಾನದಿಂದ ಪ್ರಾಂಶುಪಾಲೆ ಸಿಸ್ಟರ್ ತೆರೆಸಾ ಸೆರಾ, ಡಾ.ಲಕ್ಷ್ಮೀಶ ನಾಯ್ಕ ಅವರಿಗೆ ಸನ್ಮಾನ.