ಭಟ್ಕಳ: ತಾಲೂಕಿನ ಸೊಡಿಗದ್ದೆ ಕ್ರಾಸ್ ಸಮೀಪ ಕೆ.ಎಸ್.ಆರ್ಟಿ.ಸಿ ಬಸ್ ಹಾಗೂ ಮೀನು ತುಂಬಿದ ಪಿಕಪ್ ವಾಹನದ ನಡುವೆ ಅಪಘಾತ ಸಂಭವಿಸಿದ ಘಟನೆ ನಡೆದಿದೆ. ಭಟ್ಕಳ ಬಂದರನಿಂದ ಮೀನು ತುಂಬಿಕೊಂಡು ಕುಂದಾಪುರ ಕಡೆ ಸಾಗುತ್ತಿದ್ದ ಮೀನು ತುಂಬಿದ ಪಿಕಪ್ ವಾಹನ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬಾಗಕ್ಕೆ ಗುದ್ದಿದೆ. ಭಟ್ಕಳದಿಂದ ಕುಂದಾಪುರದ ಕಡೆ ಸಾಗುತ್ತಿದ್ದ ಕೆ.ಎಸ್ ಆರ್. ಟಿ ಸಿ ಬಸ್ ಸೊಡಿಗದ್ದೆ ಕ್ರಾಸ್ ಸಮೀಪ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಏಕಾಏಕಿ ನಿಲ್ಲಿಸಿದ ಪರಿಣಾಮ‌ ಈ ಘಟನೆ ನಡೆದಿದೆ ಎನ್ನಲಾಗಿದೆ.

RELATED ARTICLES  ಭೀಮಣ್ಣ ಪರ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ರೋಡ್ ಶೋ.

ಇದನ್ನೂ ಓದಿ – ನಡುರಸ್ತೆಯಲ್ಲಿ ತಡೆದು ಕೋಟ್ಯಾಂತರ ರೂಪಾಯಿ ದೋಚಿ ಪರಾರಿಯಾದ ಖಧೀಮರು.

ಅಪಘಾತದ ರಭಸಕ್ಕೆ ಮೀನು ತುಂಬಿದ ಪಿಕಪ್ ವಾಹನ ಸಂಪೂರ್ಣ ಜಖಂಗೊಂಡಿದ್ದು. ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಂತರ ರಸ್ತೆ ಮಧ್ಯೆ ಜಖಂಗೊಂಡಿದ್ದ ಮೀನು ತುಂಬಿದ ಪಿಕಪ್ ವಾಹನವನ್ನು ಕ್ರೇನ್ ಮೂಲಕ ರಾಷ್ಟ್ರೀಯ ಹೆದ್ದಾರಿ ಪಕ್ಕಕ್ಕೆ ಹಾಕಲಾಗಿದೆ. ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES  ಕಾಲುಜಾರಿ ಬಿದ್ದು ಮಹಿಳೆ ಸಾವು.