ಶಿರಸಿ: ಜನರಲ್ಲಿ ಪ್ರಚೋದನೆ, ಕಿಚ್ಚು ಹಚ್ಚುವ ಕೆಲಸ‌ ಮಾಡಿದ ಜಿಲ್ಲೆಯ ಶಾಸಕರು ರಾಜೀ‌ನಾಮೆ‌ ನೀಡಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೆಣದ ಮೆಲಿನ ರಾಜಕಾರಣ ಮಾಡುವದನ್ನು ಬಿಜೆಪಿ ಮೊದಲು ಬಿಡಲಿ.

ಹೊನ್ನಾವರದ ಪರೇಶ ಮೇಸ್ತ ಸಾವಿನ ಹೆಸರು ಬಳಸಿ ಅಂದಿನ ಚುನಾವಣೆ ಗೆದ್ದ ಬಿಜೆಪಿ ಶಾಸಕರಿಗೆ ನೈತಿಕತೆ ಇಲ್ಲ. ಶಿರಸಿ ಗಲಭೆಯಲ್ಲಿ ಇಂದಿನ ವಿಧಾನ ಸಭಾ ಅಧ್ಯಕ್ಷರು ವಿಶ್ವೇಶ್ವರ ಹೆಗಡೆ ಕಾಗೇರಿ ಅವರೂ ಪಾಲ್ಗೊಂಡಿದ್ದು, ಸಿಬಿಐ ವರದಿ ಬಂದ ಬಳಿಕ ಪ್ರತಿಕ್ರಿಯೆ ಕೊಟ್ಟು ರಾಜೀನಾಮೆ‌ ನೀಡಬೇಕಿದೆ ಎಂದರು.

RELATED ARTICLES  ಕುಮಟಾ ವೈಭವದ ಅಂಗವಾಗಿ ಕುಮಟಾದಲ್ಲಿ ಉದ್ಘಾಟನೆಗೊಂಡ ಚಲನಚಿತ್ರೋತ್ಸವ: ಗಣ್ಯರ ಉಪಸ್ಥಿತಿ.

ಪರೇಶ ಮೇಸ್ತ ಸಾವಿನ ಬಳಿಕ ಅಂದು ಶಿರಸಿಯಲ್ಲಿ ನಡೆದ ಪ್ರಚೋದನಕಾರಿ ಸಭೆಯಲ್ಲಿ‌ ಕಾಗೇರಿ ಅವರೂ ಇದ್ದರು. ಹಲವರಿಗೆ ಕೇಸು ಬಿದ್ದವು.ಹಾನಿಯೂ ಆದವು. ಈಗ ಸಹಜ ಸಾವು ಎಂದು ಸಿಬಿಐ ವರದಿ ಬಂದಿದೆ. ಕಾಗೇರಿ ಅವರ ಉತ್ತರ ಏನು ಎಂದು ಪ್ರಶ್ನಿಸಿದ್ದಾರೆ.

RELATED ARTICLES  ಯಕ್ಷರಂಗದ ಮೇರು ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಇನ್ನಿಲ್ಲ : ಮರೆಯಾದ ಅಭಿನವ ಶನೀಶ್ವರ

ಅಧಿಕಾರಕ್ಕೆ ಒಬ್ಬ ಯುವಕನ ಸಾವನ್ನು ಬಳಸಿಕೊಂಡಿದ್ದು ಸರಿಯಲ್ಲ. ಅಂದು ಈ‌ ಪ್ರಕರಣ ಬಳಸಿಕೊಂಡು ಆಯ್ಕೆ ಆದ ಜಿಲ್ಲೆಯ ಬಿಜೆಪಿ ಶಾಸಕರು ರಾಜೀನಾಮೆ ಕೊಟ್ಟು ಮರಳಿ‌ ಜನಾದೇಶ ಪಡೆಯಬೇಕಿದೆ. ಎಂದು ಅವರು ಕಿಡಿ ಕಾರಿದರು.

ಈ ವೇಳೆ‌ ಎಸ್.ಕೆ.ಭಾಗವತ, ದೀಪಕ ದೊಡ್ಡೂರು, ಜಗದೀಶ ಗೌಡ, ಬಸವರಾಜ್ ದೊಡ್ಮನಿ ಇತರರು ಇದ್ದರು.