ಭಟ್ಕಳ: ಕಳೆದ ಸೆಪ್ಟೆಂಬರ್ 17 ರಂದು ಮನೆಯಿಂದ ಹೊರಡುವ ಪೂರ್ವದಲ್ಲಿ ನಾನು ಕಟ್ಟಿಗೆ ತರಲು ಅರಣ್ಯಕ್ಕೆ ಹೋಗುವುದಾಗಿ ಹೇಳಿ ಹೋಗಿ ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಬೆಂಗ್ರೆ ಉಳುಮಣ್ಣಿನ ಮಾಲೆಕೊಡ್ಲು ಸಮೀಪ ಮಹಿಳೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಶವವಾಗಿ ಪತ್ತೆಯಾದ ಮಹಿಳೆಯನ್ನು ಮುರುಡೇಶ್ವರ ನಿವಾಸಿ ಮಾದೇವಿ ಸುಕ್ರಯ್ಯ ದೇವಡಿಗ (57) ಎಂದು ಗುರುತಿಸಲಾಗಿದೆ.

ದಿನನಿತ್ಯ ಅರಣ್ಯಕ್ಕೆ ಹೋಗಿ ಕಟ್ಟಿಗೆ ತಲುತ್ತಿದ್ದಳು ಎನ್ನಲಾಗಿದ್ದು ಪ್ರತಿ ನಿತ್ಯ ಈಕೆ ಬೆಳಗ್ಗೆ 8 ಗಂಟೆಗೆ ಕಟ್ಟಿಗೆ ತರಲು ಅರಣ್ಯಕ್ಕೆ ಹೋದರೆ 11 ಗಂಟೆ ಒಳಗಾಗಿ ಮನೆಗೆ ಬರುತ್ತಿದ್ದಳು.

RELATED ARTICLES  ಗಮನ ಸೆಳೆದ ಅಘನಾಶಿನಿ‌ ಆರತಿ ವಿಶೇಷ ಕಾರ್ಯಕ್ರಮ.

ಇದನ್ನೂ ಓದಿ – ಬಿಜೆಪಿ ಹೆಣದ ಹೆಸರಿನಲ್ಲಿ ರಾಜಕಾರಣ ಮಾಡುವುದನ್ನು ಮೊದಲು ಬಿಡಲಿ : ಭೀಮಣ್ಣ ವಾಗ್ದಾಳಿ.

ಆದರೆ ಅಂದು ಬೆಳಗ್ಗೆ ಹೋದವಳು ಸಂಜೆಯಾದರೂ ಮನೆಗೆ ಬಂದಿಲ್ಲ. ಇದರಿಂದ ಗಾಬರಿಗೊಂಡ ಮನೆಯವರು ಎಲ್ಲೆಡೆ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗಿಲ್ಲ.

RELATED ARTICLES  ಗಾಂಜಾ ಅಮಲಿನಲ್ಲಿ ಮಾನಿನಿಯರ ಹುಚ್ಚಾಟ : ಮಹಿಳಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ.

ಇದನ್ನೂ ಓದಿ – ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಮೀನು ತುಂಬಿದ ಲಾರಿ ನಡುವೆ ಅಪಘಾತ

ನಂತರ ಸಂಬಂಧಿಕರ ಮನೆಯಲ್ಲೂ ವಿಚಾರಿಸಿದರು ಅಲ್ಲಿಯೂ ಕೂಡ ಆಕೆ ಹೋಗದೆ ಇರುವ ಕಾರಣ ಕಾಣೆಯಾಗಿರುವ ಬಗ್ಗೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ ಇಂದು ಮಹಿಳೆಯ ಶವ ಬೆಂಗ್ರೆ ಉಳುಮಣ್ಣಿನಲ್ಲಿ ಮಾಲೆಕೊಡ್ಲು ಸಮೀಪ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.