ಕಾರವಾರ: ತಾಲೂಕಿನ ತೇಲಂಗ ರೋಡ್ ಚಂದ್ರದೇವಿವಾಡದ ಚಂದ್ರದೇವಿ ದೇವಸ್ಥಾನದ ಹತ್ತಿರ ಬೀದಿ ನಾಯಿಯೊಂದನ್ನ ನುಂಗಿ ಪೊದೆಯಲ್ಲಿ ಅಡಗಿ ಕೊಂಡಿದ್ದ ಬರೋಬ್ಬರಿ 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದನ್ನು ಹಿಡಿದು ಕಾಡಿಗೆ ಬಿಡಲಾಗಿದೆ.

ಆಹಾರ ಹುಡುಕಿಕೊಂಡು ದೇವಸ್ಥಾನದ ಬಳಿ ಬಂದಿದ್ದ ಈ ಹೆಬ್ಬಾವು, ಬೀದಿ ನಾಯಿಯೊಂದನ್ನ ಹಿಡಿದು ಅರ್ಧ ನುಂಗಿಬಿಟ್ಟಿತ್ತು. ಇದರಿಂದಾಗಿ ಸ್ಥಳೀಯರು, ದೇವಸ್ಥಾನಕ್ಕೆ ಬರುವ ಹೋಗುವ ಭಕ್ತರು ಕಂಗಾಲಾಗಿದ್ದರು. ತಕ್ಷಣ ಅರಣ್ಯ ಇಲಾಖೆಯ ಉರಗತಜ್ಞ ಗೋಪಾಲ ನಾಯ್ಕ ಹಾಗೂ ಉರಗ ಸಂರಕ್ಷಕ ನಿತಿನ್ ಅವರಿಗೆ ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು.

RELATED ARTICLES  ಮತ್ತೆ ಕುಮಟಾದಲ್ಲಿ ಚಿರತೆಯ ಭಯ : ಮನೆಯಂಗಳದಲ್ಲಿಯೇ ಇತ್ತು ಭೀಕರ ಚಿರತೆ. ಸಿ.ಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ ನೋಡಿದ್ರೆ ಮೈ ಜುಂಮ್ ಆಗುತ್ತೆ.

ಇದನ್ನೂ ಓದಿ – ಕಾಡಿಗೆ ಹೋದವಳಿಗಾಗಿ ಕಾದು ಕುಳಿತ ಮನೆಯವರು : ಆದರೆ ಸಿಕ್ಕಿದ್ದು ಶವ ಮಾತ್ರ

ಹೆಬ್ಬಾವು ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿತ್ತು. ಅದರಲ್ಲೂ ಅರ್ಧ ನುಂಗಿದ್ದ ನಾಯಿ ಕೂಡ ಜೀವ ಬಿಟ್ಟಿದ್ದರಿಂದ ಬೇಟೆಯನ್ನ ಬಿಡಿಸುವುದು ಸರಿಯಲ್ಲವೆಂದು ಸಂರಕ್ಷಣೆಗೆ ಬಂದಿದ್ದ ಇಬ್ಬರೂ ಸುಮ್ಮನಾಗಿದ್ದರು. ಆದರೆ ಸ್ಥಳೀಯರ ಒತ್ತಾಯದಿಂದಾಗಿ ಬೇಟೆಯನ್ನ ಬಿಡಿಸಿ, ಹೆಬ್ಬಾವನ್ನು ಹಿಡಿದು ಕಾಡಿಗೆ ಬಿಟ್ಟು ಬರಲಾಗಿದೆ.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ?ಯಾವ ರಾಶಿಯವರಿಗೆ ಏನು ಫಲ? ಅದೃಷ್ಟ ಸಂಖ್ಯೆ ಯಾವುದು? ದಿನಾಂಕ 23/09/2018 ರ ದ್ವಾದಶ ರಾಶಿಗಳ ದಿನ ಭವಿಷ್ಯ ಇಲ್ಲಿದೆ.

ಇದನ್ನೂ ಓದಿ – ಭೀಕರವಾಗಿ ನಡೆಯಿತು ಅಪಘಾತ ಸುತ್ತಮುತ್ತಲ ಜನ ಕಂಗಾಲು.

ಈ ಹೆಬ್ಬಾವನ್ನ ನೋಡಲು ನೂರಾರು ಜನ ನೆರೆದಿದ್ದರು. ನವರಾತ್ರಿಯಾಗಿದ್ದ ಕಾರಣ ದೇವಸ್ಥಾನಕ್ಕೆ ಬಂದವರೆಲ್ಲ ಹೆಬ್ಬಾವನ್ನ ನೋಡಲು ನಿಂತುಬಿಟ್ಟಿದ್ದರು. ಈ ಬೃಹತ್ ಹೆಬ್ಬಾವು ಸುಮಾರು 45 ಕೆಜೆ ಇದ್ದು, ನಾಲ್ಕಾರು ಜನರ ಸಹಕಾರದಿಂದ ಚೀಲಕ್ಕೆ ತುಂಬಿ ಕೊಂಡೊಯ್ಯಲಾಗಿದೆ.