ಕಾರವಾರ: ಉತ್ತರ ಕನ್ನಡದಲ್ಲಿ ಮಹಿಳೆಯರು ಮತ್ತು ಬಾಲಕಿಯರ ನಾಪತ್ತೆ ಪ್ರಕರಣಗಳು ಮುಂದುವರೆದಿದ್ದು ತವರು ಮನೆಗೆ ಹೋಗಿ ಬರುತ್ತೇನೆಂದು 6 ವರ್ಷದ ಮಗನೊಂದಿಗೆ ಹೋದ ಮಹಿಳೆ ನಾಪತ್ತೆಯಾಗಿದ್ದು, ಪತ್ನಿ ಹಾಗೂ ಮಗನನ್ನು ಹುಡುಕಿಕೊಡುವಂತೆ ಆಕೆಯ ಗಂಡ ರಂಜಿತ ಎಂಬುವರು ಮಲ್ಲಾಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.

RELATED ARTICLES  ಹೆತ್ತ ತಾಯಿ ದೂರವಾಗಿ ಮನೆಯಲ್ಲಿಯೇ ಬೇರೆ ಕೋಣೆಯಲ್ಲಿ ವಾಸ್ತವ್ಯ : ಮನನೊಂದು ಆತ್ಮಹತ್ಯೆಗೆ ಶರಣಾದ ವ್ಯಕ್ತಿ

ಪೇಂಟಿಂಗ್ ಕೆಲಸ ಮಾಡುವ ರಂಜಿತ ಎಂಬಾತ ದೂರು ನೀಡಿದ್ದು, ತನ್ನ ಪತ್ನಿ ಸಮಾಬಾನು ಹಾಗೂ 6 ವರ್ಷದ ಮಗ ನಾಪತ್ತೆಯಾಗಿದ್ದಾರೆಂದು ದೂರನ್ನು ದಾಖಲಿಸಿದ್ದಾನೆ. ಆತ ಮಲ್ಲಾಪುರದ ಮುಸ್ಲಿಂವಾಡಾದಲ್ಲಿ ವಾಸಿಸುತ್ತಿದ್ದು, ಪತ್ನಿ ತವರು ಮನೆಗೆ ಹೋಗುತ್ತೇನೆಂದು ಮಗನೊಂದಿಗೆ ಹೋಗಿದ್ದು, ತವರು ಮನೆಗೆ ಬರಲಿಲ್ಲ ಎಂದು ಹೆಂಡತಿಯ ಅಕ್ಕ, ತಾಯಿ ತಿಳಿಸಿದ್ದಾರೆ.

RELATED ARTICLES  ಕೈಲಾಸ ವಾಸಿ ಪರಶಿವನನ್ನು ಕೋಟಿ ಕೋಟಿ ಜನರು ಭಜಿಸುವ ಈ ದಿನದ ಮಹತ್ವವೇನು ಗೊತ್ತಾ?

ಇದನ್ನೂ ಓದಿ – ನಾಯಿಯನ್ನು ನುಂಗಿದ ಬೃಹತ್ ಹೆಬ್ಬಾವು : ಹಾವಿನ ರಕ್ಷಣೆ ಮಾಡಿದ ರೋಚಕ ಘಟನೆ

ಹೆಂಡತಿಯ ಫೋನ್ ಸ್ವಿಚ್ ಆಫ್ ಆಗಿದ್ದು, ಪತ್ನಿ ಹಾಗೂ ಮಗನನ್ನು ಹುಡುಕಿಕೊಡುವಂತೆ ಪೊಲೀಸರಿಗೆ ದೂರನ್ನು ನೀಡಿದ್ದಾನೆ.