ಮುಂಡಗೋಡ: ಕೃಷಿ ಉಪಕರಣಗಳ ಮಾರಾಟ ಅಂಗಡಿಯ ಬಾಗಿಲು ಮುರಿದು ಕೃಷಿ ಉಪಕರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಪಟ್ಟಣದ ಶಿರ್ಸಿ ರಸ್ತೆಯ ಪಕ್ಕದಲ್ಲಿರುವ ಈಸಿ ಲೈಫ್ ಎಂಟರಪ್ರೈಸಸ್ ಹೆಸರಿನ ಕೃಷಿ ಉಪಕರಣಗಳ ಮಾರಾಟ ಅಂಗಡಿಗೆ ಅ. 3ರ ರಾತ್ರಿಯಿಂದ ಅ. 4ರ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಕಬ್ಬಿಣದ ಬಾಗಿಲು ಮುರಿದು ಒಳ ನುಗ್ಗಿ ಅಂಗಡಿಯಲ್ಲಿದ್ದ ಹೊಂಡಾ ಕಂಪನಿಯ ಕಟರ್, ಮೀಜೋ ಕಂಪನಿಯ ಕಟರ್, ಡಬಲ್ ಬ್ಯಾಟರಿ ಸೈಯರ್ (ಪಂಪು), ಸಿಂಗಲ್ ಬ್ಯಾಟರಿ ಸೈಯರ್, ಹೊಂಡಾ ಕಂಪನಿಯ ಹಳೆಯ ಕಟರ್‌ ಹಾಗೂ ಮರ ಕತ್ತರಿಸುವ ಯಂತ್ರ ಸೇರಿ ಒಂದು ಲಕ್ಷ ನಲ್ವತ್ತೆಂಟು ಸಾವಿರದ
ಐದು ನೂರು ರೂಪಾಯಿ ಮೌಲ್ಯದ ಸಾಮಗ್ರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ವರದಿಯಾಗಿದೆ.

RELATED ARTICLES  ಧ್ವಜಾರೋಹಣಕ್ಕೆಂದು ಹೊರಟ ಶಿಕ್ಷಕ ಅಪಘಾತದಲ್ಲಿ ಸಾವು.

ಪ್ರಮೋದ ನಾರಾಯಣ ಕೂರ್ಸಿ ಎಂಬುವರು ಇಲ್ಲಿನ ಪೊಲೀಸ್ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.