ಯಲ್ಲಾಪುರ: ಬೊಲೆರೋ ವಾಹನ ಹಾಗೂ ಮೋಟಾರ್ ಸೈಕಲ್ ನಡುವೆ ಅಪಘಾತವಾದ ಘಟನೆ ತಾಲೂಕಿನ ಹಿತ್ತಳ್ಳಿ ಕ್ರಾಸ್ ಬಳಿ ನಡೆದಿದೆ. ಯಲ್ಲಾಪುರ ಕಡೆಯಿಂದ ಶಿರಸಿ ಕಡೆಗೆ ತನ್ನ ಬೊಲೆರೋ ವಾಹನದಲ್ಲಿ ಅತಿ ವೇಗವಾಗಿ ಹೋಗುತ್ತಿದ್ದ ರಮೇಶ ಈಶ್ವರ ಪೂಜಾರಿ ಎಂಬಾತನು ತಾಲೂಕಿನ ಹಿತ್ತಳ್ಳಿ ಕ್ರಾಸ್ ಬಳಿ ವಾಹನದ ನಿಯಂತ್ರಣ ಕಳೆದುಕೊಂಡು ಶಿರಸಿ ಕಡೆಯಿಂದ ಯಲ್ಲಾಪುರ ಕಡೆ ಹೋಗುತ್ತಿದ್ದ ರಾಜೇಶ ನಾರಾಯಣ ಮರಾಠ ಎಂಬಾತನು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದ್ದಾನೆ ಎಂಬ ಬಗ್ಗೆ ಸ್ಥಳೀಯ ವರದಿ ಲಭ್ಯವಾಗಿದೆ.
ಅಪಘಾತದಲ್ಲಿ ಮೋಟಾರ್ ಸೈಕಲ್ ಸವಾರ ರಾಜೇಶ ನಾರಾಯಣ ಮರಾಠ, ಆತನ ಪತ್ನಿ ಹಾಗೂ ಮಗಳಿಗೂ ಗಾಯಗಳಾಗಿದ್ದು ಯಲ್ಲಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು, ನಂತರದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ಸಹಕಾರದಲ್ಲಿ ಮುಂದಿನ ಕಾರ್ಯಾಚರಣೆ ನಡೆಸಲಾಗಿದೆ.