ಬೀಜಿಂಗ್‌ : ಕ್ಸಿನ್‌ಜಿಯಾಂಗ್‌ ಪ್ರಾಂತ್ಯ ಸೇರಿದಂತೆ ಚೀನದಾದ್ಯಂತ ಮತ್ತೂಮ್ಮೆ ಕಠಿಣ ನಿಯಮಗಳನ್ನು ಜಾರಿಗೆ ತರಲಾಗಿದೆ. ರೈಲು, ಬಸ್‌ಗಳಲ್ಲಿ ಸಾರ್ವಜನಿಕರ ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. ಹಲವು ಸ್ಥಳಗಳಲ್ಲಿ ಲಾಕ್‌ಡೌನ್‌ ಅನ್ನೂ ಜಾರಿಗೊಳಿಸಲಾಗಿದೆ.

ಜಗತ್ತಿಗೆ ಕೊರೊನಾ ಸಮಸ್ಯೆ ಉಂಟಾಗಲು ಕಾರಣವಾಗಿರುವ ದೇಶದಲ್ಲಿ ಮತ್ತೂಮ್ಮೆ ಸೋಂಕಿನ ಸಮಸ್ಯೆ ತೀವ್ರ ರೀತಿಯಲ್ಲಿ ಬಾಧಿಸಲು ಶುರುವಾಗಿದೆ. ಹೀಗಾಗಿ, ಈ ಕ್ರಮ ಕೈಗೊಳ್ಳಲಾಗುತ್ತಿದೆ. ಬುಧವಾರದ 227 ಸೇರಿದಂತೆ ಈ ವಾರದಲ್ಲಿ ಚೀನದಲ್ಲಿ 2,883 ಕೊರೊನಾ ಸೋಂಕುಗಳು ದೃಢಪಟ್ಟಿವೆ.

RELATED ARTICLES  ನಾಳೆ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ 25ನೇ ವರ್ಷದ ಚಾತುರ್ಮಾಸ್ಯ ಸೀಮೋಲ್ಲಂಘನ.

ಅ.16ರಂದು ಕಮ್ಯೂನಿಸ್ಟ್‌ ಪಾರ್ಟಿ ಆಫ್ ಚೀನಾದ ಕಾರ್ಯಕ್ರಮ ರಾಜಧಾನಿ ಬೀಜಿಂಗ್‌ನಲ್ಲಿ ನಡೆಯಲಿರುವಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಚೀನದ ಹಾಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರಿಗೆ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ.

RELATED ARTICLES  ಅಭಯ ಗೋಯಾತ್ರೆಗೆ ಡಿಸೆಂಬರ್ 3ರಂದು ಕುಮಟಾದಲ್ಲಿ ಚಾಲನೆ.