ಹೊನ್ನಾವರ : ಭಾರತಜೋಡೋ ಯಾತ್ರೆ 7 ದಿನಕ್ಕೆ ಪಾದರ್ಪಣೆ ಮಾಡಿದ್ದು, ರಾಜ್ಯದಲ್ಲಿ ನಾಲ್ಕು ದಿನದಿಂದ ನಿರೀಕ್ಷೆಗೂ ಮೀರಿ ಯಶಸ್ಸಿಯಾಗುತ್ತಿದೆ. ಜನರ ಉತ್ಸಾಹ ಸ್ವಾಗತಕೋರುವ ರೀತಿ ನೋಡಿದಾಗ ಮುಂದೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಹಾಗೂ ದೇಶದ ಪ್ರಧಾನಿ ರಾಹುಲ್ ಗಾಂಧಿಯಾಗುವುದು ನಿಶ್ಚಿತವಾಗಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡರಸಿ ಮಾತನಾಡಿದ ಅವರು ಜಾತಿ ಧರ್ಮದ ಕಂದಕ ದೂರ ಮಾಡಿ ಎಲ್ಲರೂ ಒಗ್ಗೂಡಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಯ ವೇಳೆ ಹಲವು ಸಂಕಷ್ಟವನ್ನು ಹಾಗೂ ನೊಂದವರ ಭೇಟಿಯಾಗಿ ಅವರ ಸಮಸ್ಯೆ ಅರಿಯುವ ಕಾಯಕದಲ್ಲಿ ಪಕ್ಷದ ನಾಯಕರು ತೊಡಗಿದ್ದಾರೆ. ಜಿಲ್ಲೆಯಿಂದ 25ರಿಂದ 30 ಸಾವಿರ ಪಕ್ಷದ ಕಾರ್ಯಕರ್ತರು ಭಾರತ ಜೋಡೋ ಯಾತ್ರೆಗೆ ತೆರಳಲು ಸಜ್ಜಾಗಿದ್ದು, ಅ.12ರಂದು ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಯಾತ್ರೆಯ ಬಗ್ಗೆ ಬಿಜೆಪಿಯವರು ತಡೆಯಲಾಗದ ನೋವು ಅನುಭವಿಸುತ್ತಿದ್ದಾರೆ. ನಾವು ಪಾದಯಾತ್ರೆ ನಡೆಸುತ್ತಿರುವುದನ್ನು ನೋಡಿ ಬಿಜೆಪಿಯವರು ಯಾತ್ರೆಗೆ ಮುಂದಾಗುತ್ತಿದ್ದು, ಅವರು ಕಾರಿನಲ್ಲಿ ಹೋಗಲು ಸಜ್ಜಾಗುತ್ತಿದ್ದಾರೆ. ಬಿಜೆಪಿಯವರದ್ದು ಮಜಾ ಯಾತ್ರೆ ಎಂದು ವ್ಯಂಗ್ಯವಾಡಿದರು.
ಪತ್ರಿಕಾಗೊಷ್ಟಿಯಲ್ಲಿ ಮಾಜಿ ಶಾಸಕರಾದ ಶಾರದಾ ಶೆಟ್ಟಿ, ಮಂಕಾಳ ವೈದ್ಯ, ಸತೀಶ ಸೈಲ್, ಕಾಂಗ್ರೇಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಕಾಂಗ್ರೇಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಜಾತ ಗಾವಂಕರ್, ಬ್ಲಾಕ್ ಅಧ್ಯಕ್ಷರಾದ ಜಗದೀಪ ತೆಂಗೇರಿ, ವಿ.ಎಲ್. ನಾಯ್ಕ, ಗೊವಿಂದ ನಾಯ್ಕ, ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ, ಶಿವಾನಂದ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.