ಭಟ್ಕಳ : ರಾಷ್ಟ್ರೀಯ ಹೆದ್ದಾರಿ 66 ಬೈಲೂರು ಕ್ರಾಸ್ ಸಮೀಪ ಸುಮಾರು 35 ರಿಂದ 40 ವರ್ಷದ ಅಪರಿಚಿತ ಮಹಿಳೆ ಮೃತಳಾಗಿ ಬಿದ್ದುದನ್ನು ಗಮನಿಸಿದ ವ್ಯಕ್ತಿಯೊಬ್ಬ ಪೊಲೀಸರಿಗೆ ಮಾಹಿತಿ ನೀಡಿದ್ದು, ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಮಾನಸಿಕ ಅಸ್ವಸ್ಥೆಯಾಗಿದ್ದ ಅಲೆಮಾರಿ ಭಿಕ್ಷುಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಡೆದ ಬಗ್ಗೆ ವರದಿಯಾಗಿದೆ.

RELATED ARTICLES  ಜಯಾ ಯಾಜಿ ಶಿರಾಲಿ ಗೌರವಾರ್ಥ ರಾಜ್ಯಮಟ್ಟದ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದ ಜಿಲ್ಲಾ ಕ.ಸಾ.ಪ.

ವ್ಯಕ್ತಯೊಬ್ಬ ತನ್ನ ಸ್ನೇಹಿತನೊಂದಿಗೆ ವೈಯಕ್ತಿಕ ಕೆಲಸದ ನಿಮಿತ್ತ ಹೊನ್ನಾವರಕ್ಕೆ ಹೋಗಿ ಮರಳಿ ಬರುವ ವೇಳೆ ಈಕೆ ಸಾವನ್ನಪ್ಪಿದ್ದು ಕಣ್ಣಿಗೆಬಿದ್ದಿದೆ ಎನ್ನಲಾಗಿದೆ. ಮೃತಳ ಎರಡು ಕಾಲಿನ ಪಾದಗಳಿಗೆ ಗಂಭೀರವಾಗಿ ಗಾಯಗಳಾಗಿತ್ತು. ಈಕೆ ಕೆಲವು ದಿನಗಳಿಂದ ಹರಿದ ಬಟ್ಟೆಗಳನ್ನು ಧರಿಸಿಕೊಂಡು ಕೈ ಚೀಲ ಹಿಡಿದುಕೊಂಡು ಬೈಲೂರು ಕ್ರಾಸ್ ಸಣ್ಣಬಲಸೆ ಹೆದ್ದಾರಿ ಬದಿಯಲ್ಲಿ ಅಲೆಮಾರಿ ಭಿಕ್ಷುಕಿ ಹಾಗೂ ಮಾನಸಿಕ ಅಶ್ವಸ್ಥಳ ರೀತಿಯಲ್ಲಿ ತಿರುಗಾಡುತ್ತಿದ್ದಳು.

RELATED ARTICLES  ಅವ್ಯಾಹತವಾಗಿ 500ನೇ ದಿನ ಪೂರೈಸಿದ "ಗೋಕರ್ಣ ಗೌರವ"

ಆದರೆ ಅಪರಿಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದು ಆಕೆ ಮೃತಪಟ್ಟಿದ್ದಾಳೆ. ಈ ಕುರಿತು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.