ಕುಮಟಾ: ತಾಲೂಕಿನ ಬರ್ಗಿಯ ಸರಕಾರಿ ಪ್ರೌಢಶಾಲೆಯಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ನಡೆದ ಸರಸ್ವತಿ ಪೂಜೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳು ಆಯೋಜಿಸಿರುವ “ಗುರುವಂದನೆ” ಕಾರ್ಯಕ್ರಮವು ವಿಶೇಷವಾಗಿತ್ತು. ಆದಿತ್ಯ ಪಟಗಾರ ಹಾಗೂ ಸುಜಲ್ ಪಟಗಾರ ಅವರ ನೇತ್ರತ್ವದಲ್ಲಿ ಶಾಲೆಯಲ್ಲಿ ಎಲ್ಲಾ ಶಿಕ್ಷಕ ಸಿಬ್ಬಂದಿಗಳಿಗೂ ಪ್ರಾಥಃಸ್ಮರಣೀಯ|ಶಿಕ್ಷಕ ಪ್ರೇಮಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರದೊಂದಿಗೆ ಶಾಲು ಗೌರವ ಸಮರ್ಪಿಸಿ-ಸರಸ್ವತಿಯ ಸನ್ನಿಧಿಯಲ್ಲಿ ವಿದ್ಯಾರ್ಥಿಗಳು ಭಾವಪರವಶರಾಗಿ ತಮ್ಮ ಗುರು ಭಕ್ತಿಯನ್ನು ಸಾಧರಪಡಿಸಿರುವುದು ನವಮನ್ವಂತರಕ್ಕೆ ನಾಂದಿಯಾಗಿದೆ ಎಂದು ಹಿರಿಯ ಶಿಕ್ಷಕಿ ಸರಸ್ವತಿ ನಾಯಕ ಎದೆದುಂಬಿ ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಸ್.ಡಿ.ಎಮ್.ಸಿ ಯ ಮುರಳೀಧರ ನಾಯ್ಕ ಹಾಗೂ ಹಳೆಯ ವಿದ್ಯಾರ್ಥಿ ರಮೇಶ ಜಯರಾಮ ನಾಯ್ಕರವರನ್ನು ಸನ್ಮಾನಿಸಲಾಯಿತು.

RELATED ARTICLES  ಕಂದಕಕ್ಕೆ ಇಳಿದಿದ್ದ ಅಣು ಇಂಧನ ತ್ಯಾಜ್ಯ ತುಂಬಿದ ವಾಹನ! ಮುಂದುವರಿದ ತೆರವು ಕಾರ್ಯಾಚರಣೆ


ನಾಲ್ಕು ವರ್ಷಗಳವರೆಗೆ ಬರ್ಗಿ ಪ್ರೌಢಶಾಲೆಯಲ್ಲಿ ಮುಖ್ಯಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿ ಕುಮಟಾದ ಡಯಟ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳ ತತ್ಸಮಾನ ಉಪನ್ಯಾಸಕರ ಹುದ್ದೆಗೆ ಬಡ್ತಿಯನ್ನು ಹೊಂದಿದ ಉಮೇಶ ನಾಯ್ಕರವರ ಪರವಾಗಿ ಗುರುನಮನ ಕಾಣಿಕೆಯನ್ನು ವಿದ್ಯಾರ್ಥಿಗಳಿಂದ ಸ್ವೀಕರಿಸಿದ ಪ್ರಭಾರ ಮುಖ್ಯಾಧ್ಯಾಪಕ ಪಿ. ಎನ್. ನಾಯ್ಕ ಮಾತನ್ನಾಡಿ- ವಿದ್ಯಾರ್ಥಿಗಳಲ್ಲಿಯ ಸಜ್ಜನಿಕೆಯ ಸಂಸ್ಕಾರವು ಅವರಲ್ಲಿನ ನಿರಂತರ ಪರಿಶ್ರಮದ ಫಲವಾಗಿ ಉನ್ನತ ಸ್ಥಾನಕ್ಕೆ ತಲುಪುವಂತಾಗಲೆಂದು ಶುಭ ಹಾರೈಸಿದರು.

RELATED ARTICLES  ಯುವಕನ ಮರ್ಮಾಂಗಕ್ಕೆ ಕಚ್ಚಿದ ಹಾವು : ಯುವಕನಿಗೆ ಚಿಕಿತ್ಸೆ.


ವರ್ಗ ಶಿಕ್ಷಕಿ ಗೀತಾ ನಾಗೇಕರ್ ಹಾಗೂ ಸಂಸ್ಕೃತ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿ ಮಾತನ್ನಾಡಿದರು. ಕೆ. ಬಿ. ಯಶೋಧಾ, ಚಂಪಾವತಿ ನಾಯ್ಕ, ಕಮಲಾಬಾಯಿ ಭಾಗವತ್, ವೀಣಾ ಗಾಂವಕರ್, ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ತಾರಾ ನಾಯ್ಕ, ಪುನೀತ್ ಕುಮಾರ, ಫಿರೋಜ್ ಖಾನ್, ಸುಮನಾ ನಾಯ್ಕ ಹಾಗೂ ಗೀತಾ ಗಾವಡಿ ಮೊದಲಾದವರಿದ್ದರು.