ಶಿರಸಿ: ಶಿರಸಿ, ಯಲ್ಲಾಪುರ ತಾಲೂಕುಗಳಲ್ಲಿ ಹಲವೆಡೆ ಹವಾಮಾನದ ವೈಪರಿತ್ಯದಿಂದ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಹರಡುತ್ತಿದ್ದು, ರೋಗದ ನಿಯಂತ್ರಣಕ್ಕೆ ಸಿಂಪರಣೆ ಕೈಗೊಳ್ಳಲು ಪ್ರತಿ ಫಲಾನುಭವಿಗೆ ತೋಟಗಾರಿಕೆ ಇಲಾಖೆಯಿಂದ 3-30-00 ಎಕರೆವರೆಗಿನ ಪ್ರದೇಶಕ್ಕೆ ಸಿಂಪರಣೆಗೆ ನೆರವು ನೀಡಲಾಗುವುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳು ತಿಳಿಸಿದ್ದಾರೆ.
ಶಿರಸಿ, ಯಲ್ಲಾಪುರ ತಾಲೂಕುಗಳ ತೋಟಗಾರಿಕೆ ನಿರ್ದೇಶಕರುಗಳು ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ, ತಾಲೂಕಿನ ಹಲವೆಡೆ ಹವಾಮಾನದ ವೈಪರಿತ್ಯದಿಂದ ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗ ಹರಡುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಎಲೆ ಚುಕ್ಕೆ ರೋಗವು ಕೊಲೆಟೊಟ್ರೈಕಮ್ ಗ್ಲೋಯೋಸ್ಪೊರಿಯೊಯಿಡ್ಸ್ ಎಂಬ ಶಿಲೀಂದ್ರದಿಂದ ಬರುತ್ತಿದ್ದು ರೋಗವು ಗಾಳಿಯಲ್ಲಿ ಹರಡುತ್ತಿದೆ. ಎಲೆ ಚುಕ್ಕೆ ರೋಗದಿಂದ ಹಾನಿಗೊಳಗಾದ ತೋಟಗಳಲ್ಲಿ ರೋಗದ ನಿಯಂತ್ರಣಕ್ಕೆ ಸಿಂಪರಣೆ ಕೈಗೊಳ್ಳಲು ಪ್ರತಿ ಫಲಾನುಭವಿಗೆ ತೋಟಗಾರಿಕೆ ಇಲಾಖೆಯಿಂದ 3-30-00 ಎಕರೆವರೆಗಿನ ಪ್ರದೇಶಕ್ಕೆ ಸಿಂಪರಣೆಗೆ ನೆರವು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲೂಕು ವ್ಯಾಪಿಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕಛೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.