ಹೊನ್ನಾವರ: ಕರ್ತವ್ಯದಲ್ಲಿ ತೊಡಗಿದ್ದ ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಶರ್ಟ್ ಹಿಡಿದು ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುವ ಘಟನೆ ಪಟ್ಟಣದ ಶರಾವತಿ ವೃತ್ತದ ಬಳಿ ನಡೆದಿದೆ.

ಮುಗ್ವಾ ಆರೊಳ್ಳಿಯ ರಾಘವೇಂದ್ರ ಭಾಸ್ಕರ್ ಶೇಟ್ (29) ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ಮಾಡಿದ ಆರೋಪಿ. ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಕೃಷ್ಣ ದೇವು ಗೌಡ ಅವರು ಹಲ್ಲೆಗೊಳಗಾದವರು. ಇವರು ತಮ್ಮ ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ತೊಡಗಿದ್ದ ವೇಳೆ ಬೇಕ್ ಸವಾರರೊಬ್ಬರು ಆಕಸ್ಮಿಕವಾಗಿ ಬಿದ್ದು ಗಾಯಗೊಂಡಿದ್ದರು.

RELATED ARTICLES  ಕವಲಕ್ಕಿ ಸ್ಟೇಷನರಿ ಮತ್ತು ತಂಪು ಪಾನೀಯ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿ

ಇದನ್ನೂ ಓದಿ – ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಜಾಗ ಪರಿಶೀಲನೆಗೆ ಆರೋಗ್ಯ ಸಚಿವರ ಭೇಟಿ..!

ಇವರನ್ನು ಉಪಚರಿಸುತ್ತಿರುವ ವೇಳೆ ರಾಘವೇಂದ್ರ ಭಾಸ್ಕರ್ ಶೇಟ್ ಎಂಬಾತ ಏಕಾಏಕಿ ಕಾರಲ್ಲಿ ಬಂದು ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಶರ್ಟ್ ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಾನೆ ಎನ್ನಲಾಗಿದೆ. ಜೊತೆಗೆ ತನ್ನ ಕಾರನ್ನು ನಡುತಸ್ತೆಯಲ್ಲಿ ನಿಲ್ಲಿಸಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿ ತೊಂದರೆ ನೀಡಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಹೊನ್ನಾವರ ಠಾಣೆಯಲ್ಲಿ ದೂರು ನೀಡಿದ್ದು. ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಂಡಿದ್ದಾರೆ.

RELATED ARTICLES  ಕುಮಟಾದ ಪ್ರಸಿದ್ಧ ಟೈಲರ್ ' ಲೀಸ್ ಡ್ರೆಸಸ್' ನ ಮಾಲಿಕ ಸುರೇಶ ಭಂಡಾರಿ ಇನ್ನಿಲ್ಲ.