ದಾಂಡೇಲಿ: ವಿಪರೀತ ಕುಡಿತದ ಚಟಕ್ಕೆ ಬಿದ್ದು ವ್ಯಕ್ತಿಯೋರ್ವ ಬಲಿಯಾದ ಘಟನೆ ನಗರದ ಟಿ.ಆರ್‌.ಟಿ ಕ್ರಾಸ್ ಹತ್ತಿರದ ಮನೆಯೊಂದರ ಮುಂಭಾಗದಲ್ಲಿ ನಡೆದಿದೆ ಎಂದು ವರದಿಯಾಗಿದೆ. ನಗರದ ಅಂಬೇವಾಡಿ ರೈಲ್ವೆಗೇಟ್ ನಿವಾಸಿಯಾಗಿರುವ 40 ವರ್ಷ ವಯಸ್ಸಿನ ಲಿಂಗಾ ಹನುಮಂತಪ್ಪ ಎಂಬಾತನೆ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾನೆ.

RELATED ARTICLES  ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್

ಈತ ಪ್ರತಿದಿನ ಸರಾಯಿ ಕುಡಿದು ಊಟ ಮಾಡದೇ ಅಲ್ಲಿ ಇಲ್ಲಿ ಎಂದು ತಿರುಗಾಡುತ್ತಿದ್ದನೆಂದು ಹೇಳಲಾಗಿದೆ. ಈತನ ಕುಡಿತವೆ ಸಾವಿಗೆ ಕಾರಣವಾಗಿದ್ದು, ಈತನ ಸಾವಿನಲ್ಲಿ ಯಾವುದೇ ಸ೦ಶಯವಿರುವುದಿಲ್ಲ ಎಂದು ಮೃತದ ಸಹೋದರ ಕಂಠೇಶ್ವರ ಹನುಮಂತಪ ಚಲವಾದಿಯವರು ಪೊಲೀಸ್ ಠಾಣೆಯಲ್ಲಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES  ತವರಿಗೆ ಹೋಗಿ ಬರುತ್ತೇನೆ ಎಂದು ಹೊರಟವಳು ನಾಪತ್ತೆ.